ಸಾರಾಂಶ
ಜೈಪುರ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್ ಸೋಲಿನ ಸರಪಳಿ ಕಳಚುತ್ತಿಲ್ಲ. ಶುಕ್ರವಾರ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಟೈಟಾನ್ಸ್‌ಗೆ 35-38 ಅಂಕಗಳ ಸೋಲು ಎದುರಾಯಿತು. ಇದು ಟೂರ್ನಿಯಲ್ಲಿ ತಂಡಕ್ಕೆ 12 ಪಂದ್ಯಗಳಲ್ಲಿ 11ನೇ ಸೋಲು. ಅತ್ತ ಜೈಪುರ 11ರಲ್ಲಿ 7ನೇ ಜಯ ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.ಏಕಮುಖವಾಗಿ ಸಾಗಿದ ಮೊದಲಾರ್ಧಲ್ಲಿ ಜೈಪುರ 27-6 ಅಂಕಗಳ ದೊಡ್ಡ ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ಬಳಿಕ ಅನಿರೀಕ್ಷಿತ ಹೋರಾಟ ಪ್ರದರ್ಶಿಸಿದ ಟೈಟಾನ್ಸ್, ದ್ವಿತೀಯಾರ್ಧದಲ್ಲಿ 27 ಅಂಕ ಗಳಿಸಿತು. ಆದರೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈಪುರದ ಅರ್ಜುನ್ ದೇಸ್ವಾಲ್ 14 ಅಂಕ ಗಳಿಸಿದರೆ, ಟೈಟಾನ್ಸ್‌ನ ಪವನ್ ಶೆರವಾತ್(12 ಅಂಕ) ಹೋರಾಟ ವ್ಯರ್ಥವಾಯಿತು.ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪುಣೇರಿ ಪಲ್ಟನ್ 37-17 ಅಂಕಗಳ ಬೃಹತ್ ಗೆಲುವು ಸಾಧಿಸಿತು. ಪುಣೆ 11 ಪಂದ್ಯಗಳಲ್ಲಿ 10ನೇ ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡರೆ, ಗುಜರಾತ್ 12 ಪಂದ್ಯಗಳಲ್ಲಿ 5ನೇ ಸೋಲು ಕಂಡಿತು.ಇಂದಿನ ಪಂದ್ಯಗಳು:ಜೈಪುರ-ಪುಣೇರಿ, ರಾತ್ರಿ 8ಕ್ಕೆಯುಪಿ-ಬೆಂಗಾಲ್, ರಾತ್ರಿ 9ಕ್ಕೆ