ಧೋನಿ ಮ್ಯಾಜಿಕ್‌ಗೂ ಬಗ್ಗದ ಡೆಲ್ಲಿ: ಟೂರ್ನಿಯಲ್ಲಿ ಮೊದಲ ಗೆಲುವು!

| Published : Apr 01 2024, 12:46 AM IST / Updated: Apr 01 2024, 07:14 AM IST

ಧೋನಿ ಮ್ಯಾಜಿಕ್‌ಗೂ ಬಗ್ಗದ ಡೆಲ್ಲಿ: ಟೂರ್ನಿಯಲ್ಲಿ ಮೊದಲ ಗೆಲುವು!
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನೈ ಸೂಪರ್‌ ಕಿಂಗ್ಸ್‌ನ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿತು. ಆರಂಭಿಕ 2 ಪಂದ್ಯ ಸೋತಿದ್ದ ಡೆಲ್ಲಿ ಮೊದಲ ಗೆಲುವು ದಾಖಲಿಸಿತು.

ವಿಶಾಖಪಟ್ಟಣಂ: ಎಂ.ಎಸ್‌.ಧೋನಿ ಕೊನೆಯಲ್ಲಿ ಪ್ರದರ್ಶಿಸಿದ ಹೋರಾಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ತಂಡ 20 ರನ್‌ ಸೋಲನುಭವಿಸಿದೆ. ಇದರೊಂದಿಗೆ ಚೆನ್ನೈ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡರೆ, ಆರಂಭಿಕ 2 ಪಂದ್ಯ ಸೋತಿದ್ದ ಡೆಲ್ಲಿ ಮೊದಲ ಗೆಲುವು ದಾಖಲಿಸಿತು. 

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ತಂಡ, ವಾರ್ನರ್‌, ಪೃಥ್ವಿ ಶಾ ಹಾಗೂ ಪಂತ್‌ ಅಬ್ಬರದಿಂದಾಗಿ 5 ವಿಕೆಟ್‌ಗೆ 191 ರನ್‌ ಕಲೆಹಾಕಿತು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತು ಕೊಟ್ಟ ವಾರ್ನರ್‌-ಪೃಥ್ವಿ ಮೊದಲ ವಿಕೆಟ್‌ಗೆ 93 ರನ್‌ ಜೊತೆಯಾಟವಾಡಿದರು. ಪೃಥ್ವಿ 27 ಎಸೆತಕ್ಕೆ 43, ವಾರ್ನರ್‌ 35 ಎಸೆತಗಳಲ್ಲಿ 52 ರನ್‌ ಚಚ್ಚಿದರು. ಪಂತ್‌ 51 ರನ್‌ ಸಿಡಿಸಿ ತಂಡವನ್ನು 200ರ ಸನಿಹಕ್ಕೆ ತಲುಪಿಸಿದರು. ಪತಿರನ್‌ 3 ವಿಕೆಟ್‌ ಪಡೆದರು.

ದೊಡ್ಡ ಗುರಿಯನ್ನು ಬೆನ್ನತ್ತಿದ ಚೆನ್ನೈ ಆರಂಭದಲ್ಲೇ ಎಡವಿತು. 7ಕ್ಕೆ 2 ವಿಕೆಟ್ ಕಳೆದುಕೊಂಡ ತಂಡ ಪವರ್‌-ಪ್ಲೇನಲ್ಲಿ ಗಳಿಸಿದ್ದು 32 ರನ್‌. ಬಳಿಕ ರಹಾನೆ(45), ಡ್ಯಾರಿಲ್‌ ಮಿಚೆಲ್‌(34), ಜಡೇಜಾ(21) ಗಳಿಸಿದರೆ, ಕೊನೆಯಲ್ಲಿ 16 ಎಸೆತದಲ್ಲಿ 3 ಸಿಕ್ಸರ್‌, 4 ಬೌಂಡರಿಗಳೊಂದಿಗೆ 37 ರನ್‌ ಚಚ್ಚಿದ ಧೋನಿ ತಮ್ಮಲ್ಲಿ ಇನ್ನೂ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟರು. ಸ್ಕೋರ್‌: ಡೆಲ್ಲಿ 191/5 (ವಾರ್ನರ್‌ 52, ಪಂತ್‌ 51, ಪತಿರನ 3-31), ಚೆನ್ನೈ 171/6(ರಹಾನೆ 45, ಧೋನಿ 37*, ಮುಕೇಶ್‌ 3-21)