ಚೆನ್ನೈ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ. ಬ್ಯಾಟರ್‌ಗಳಂತೂ ಸ್ಫೋಟಕ ಆಟವಾಡುತ್ತಿದ್ದು, ರಚಿನ್‌ ರವೀಂದ್ರ, ಶಿವಂ ದುಬೆ ತಮ್ಮ ಆಟದ ಮೂಲಕವೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದಾರೆ.

ವಿಶಾಖಪಟ್ಟಣಂ: ಸತತ 2 ಗೆಲುವಿನೊಂದಿಗೆ 17ನೇ ಆವೃತ್ತಿ ಟೂರ್ನಿಯ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿರುವ ಚೆನ್ನೈ ತಂಡ ಹ್ಯಾಟ್ರಿಕ್‌ ಗೆಲುವಿನ ಕಾತರದಲ್ಲಿದ್ದು, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದೆ.

ಸತತ 2 ಸೋಲಿನಿಂದ ಕಂಗೆಟ್ಟಿರುವ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಋತುರಾಜ್‌ ಗಾಯಕ್ವಾಡ್‌ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಚೆನ್ನೈ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ. ಬ್ಯಾಟರ್‌ಗಳಂತೂ ಸ್ಫೋಟಕ ಆಟವಾಡುತ್ತಿದ್ದು, ರಚಿನ್‌ ರವೀಂದ್ರ, ಶಿವಂ ದುಬೆ ತಮ್ಮ ಆಟದ ಮೂಲಕವೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದಾರೆ. 

ಗಾಯಕ್ವಾಡ್‌, ರಹಾನೆ, ಡ್ಯಾರಿಲ್‌ ಮಿಚೆಲ್‌, ಸಮೀರ್‌ ಕೂಡಾ ಅಬ್ಬರಿಸುತ್ತಿದ್ದು, ಬೌಲಿಂಗ್‌ನಲ್ಲಿ ಮುಸ್ತಾಫಿಜುರ್‌, ದೀಪಕ್‌, ತುಷಾರ್, ಪತಿರನ, ಜಡೇಜಾ ತಂಡಕ್ಕೆ ಆಸರೆಯಾಗುತ್ತಿದ್ದಾರೆ.ಅತ್ತ ಡೆಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ವಿಫಲವಾಗಿದ್ದು, ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಚೆನ್ನೈ ವಿರುದ್ಧ ಗೆಲುವು ದಕ್ಕಲಿದೆ. ವಾರ್ನರ್‌, ಮಾರ್ಷ್‌, ಪೃಥ್ವಿ ಶಾ, ಕುಲ್ದೀಪ್‌ ಯಾದವ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಒಟ್ಟು ಮುಖಾಮುಖಿ: 29

ಚೆನ್ನೈ: 19ಡೆಲ್ಲಿ: 10

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್(ನಾಯಕ), ರಚಿನ್‌, ರಹಾನೆ, ಮಿಚೆಲ್‌, ಜಡೇಜಾ, ಸಮೀರ್‌, ಧೋನಿ, ದೀಪಕ್‌, ತುಷಾರ್‌, ಪತಿರನ, ಮುಸ್ತಾಫಿಜುರ್‌. ಡೆಲ್ಲಿ: ವಾರ್ನರ್‌, ಪೃಥ್ವಿ ಶಾ, ಮಾರ್ಷ್‌, ರಿಷಭ್‌(ನಾಯಕ), ಸ್ಟಬ್ಸ್‌, ಅಭಿಷೇಕ್‌ ಪೊರೆಲ್‌, ಅಕ್ಷರ್‌, ಕುಲ್ದೀಪ್‌, ನೋಕಿಯಾ, ಖಲೀಲ್‌, ಮುಕೇಶ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.