ಸಾರಾಂಶ
ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆಯಲ್ಲಿ ಕ್ರೀಡಾ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಚುನಾವಣೆಯನ್ನು ಅಸಿಂಧುಗೊಳಿಸಬೇಕೆಂದು ಎಂದು ಕುಸ್ತಿಪಟುಗಳು ಕೋರಿದ್ದರು.
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ಡಬ್ಲ್ಯುಎಫ್‌ಐ ನೋಟಿಸ್ ಜಾರಿಗೊಳಿಸಿದೆ. ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆ ಅಕ್ರಮ ಎಂದು ಆರೋಪಿಸಿರುವ ತಾರಾ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು. ಚುನಾವಣೆಯಲ್ಲಿ ಕ್ರೀಡಾ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಚುನಾವಣೆಯನ್ನು ಅಸಿಂಧುಗೊಳಿಸಬೇಕೆಂದು ಎಂದು ಕುಸ್ತಿಪಟುಗಳು ಕೋರಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಚಿನ್ ದತ್ತಾ ಅವರು ಈ ಬಗ್ಗೆ ಉತ್ತರಿಸುವಂತೆ ಸರ್ಕಾರ, ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್‌ಐ ಹಾಗೂ ಸ್ವತಂತ್ರ ಸಮಿತಿಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಮಾ.7ಕ್ಕೆ ನಿಗದಿಪಡಿಸಿದೆ.
ಕ್ಯಾಂಡಿಡೇಡ್ಸ್ ಚೆಸ್: 1ನೇ ಸುತ್ತಲ್ಲಿ ಗುಕೇಶ್-ವಿದಿತ್ ಫೈಟ್ ಟೊರೊಂಟೊ: ಫೆ.3ರಿಂದ ಕೆನಡಾದ ಟೊರೊಂಟೊದಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ವಿದಿತ್ ಗುಜರಾತಿ ಹಾಗೂ ಡಿ.ಗುಕೇಶ್ ಮುಖಾಮುಖಿಯಾಗಲಿದ್ದಾರೆ. ಟೂರ್ನಿಯ ಪುರುಷ, ಮಹಿಳಾ ವಿಭಾಗಗಳಲ್ಲಿ ತಲಾ 8 ಮಂದಿ ಸ್ಪರ್ಧಿಸಲಿದ್ದು, ಗೆದ್ದವರು ಹಾಲಿ ವಿಶ್ವ ಚಾಂಪಿಯನ್ ಜೊತೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ. 14 ಸುತ್ತುಗಳಿರುವ ಟೂರ್ನಿಯಲ್ಲಿ ಗುಕೇಶ್‌ಗೆ 2ನೇ ಸುತ್ತಿನಲ್ಲಿ ಪ್ರಜ್ಞಾನಂದ ಎದುರಾಗಲಿದ್ದು, 3ನೇ ಸುತ್ತಿನಲ್ಲಿ ಪ್ರಜ್ಞಾನಂದ-ಗುಕೇಶ್ ಮುಖಾಮುಖಿಯಾಗಲಿದ್ದಾರೆ. ಮಹಿಳಾ ವಿಭಾಗದಲ್ಲಿ ಆರಂಭಿಕ ಸುತ್ತಿನಲ್ಲಿ ಕೊನೆರು ಹಂಪಿ ಹಾಗೂ ವೈಶಾಲಿ ಪರಸ್ಪರ ಸೆಣಸಾಡಲಿದ್ದಾರೆ.