17 ವರ್ಷದ ಐಪಿಎಲ್‌ನಲ್ಲಿ ಕಾರ್ತಿಕ್‌ ತಪ್ಪಿಸಿಕೊಂಡಿದ್ದು ಕೇವಲ ಎರಡೇ ಪಂದ್ಯ!

| Published : May 24 2024, 12:54 AM IST / Updated: May 24 2024, 04:10 AM IST

17 ವರ್ಷದ ಐಪಿಎಲ್‌ನಲ್ಲಿ ಕಾರ್ತಿಕ್‌ ತಪ್ಪಿಸಿಕೊಂಡಿದ್ದು ಕೇವಲ ಎರಡೇ ಪಂದ್ಯ!
Share this Article
  • FB
  • TW
  • Linkdin
  • Email

ಸಾರಾಂಶ

2008ರಲ್ಲಿ ಡೆಲ್ಲಿ ತಂಡದಲ್ಲಿದ್ದ ಕಾರ್ತಿಕ್‌ ಆ ವರ್ಷ ಒಂದು ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ 2023ರಲ್ಲಿ ಆರ್‌ಸಿಬಿ ಪರ 1 ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿದ್ದಾಗ ಆಡುವ ಅವಕಾಶ ಸಿಕ್ಕಿರಲಿಲ್ಲ.

ಅಹಮದಾಬಾದ್‌: ರಾಜಸ್ಥಾನ ವಿರುದ್ಧ ಸೋಲಿನೊಂದಿಗೆ ಬುಧವಾರ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಆರ್‌ಸಿಬಿ ತಂಡದ ದಿನೇಶ್ ಕಾರ್ತಿಕ್‌ 17 ವರ್ಷದ ಐಪಿಎಲ್‌ ವೃತ್ತಿ ಬದುಕಿನಲ್ಲಿ 257 ಪಂದ್ಯಗಳನ್ನಾಡಿದ್ದು, ಕೇವಲ 2 ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ. 

ಅವರು ಐಪಿಎಲ್‌ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಡೆಲ್ಲಿ ತಂಡದಲ್ಲಿದ್ದ ಕಾರ್ತಿಕ್‌ ಆ ವರ್ಷ ಒಂದು ಪಂದ್ಯದಲ್ಲಿ ಆಡಿರಲಿಲ್ಲ. 

ಬಳಿಕ 2023ರಲ್ಲಿ ಆರ್‌ಸಿಬಿ ಪರ 1 ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿದ್ದಾಗ ಆಡುವ ಅವಕಾಶ ಸಿಕ್ಕಿರಲಿಲ್ಲ. ಉಳಿದಂತೆ 17 ವರ್ಷದಲ್ಲಿ ಅವರಿದ್ದ ತಂಡ ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡದ ಪರ ಕಣಕ್ಕಿಳಿದಿದ್ದಾರೆ.

ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲೂ ಆಡುವ ವಿಶ್ವಾಸ: ಚೆನ್ನೈ ಸಿಇಒ

ಚೆನ್ನೈ: ಎಂ.ಎಸ್‌.ಧೋನಿ 2025ರ ಐಪಿಎಲ್‌ನಲ್ಲೂ ಆಡುವ ಭರವಸೆ ಇದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕಾಶಿ ವಿಶ್ವನಾಥನ್‌ ತಿಳಿಸಿದ್ದಾರೆ. ಈ ಬಗ್ಗೆ ಸಿಎಸ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ‘ಮುಂದಿನ ಆವೃತ್ತಿಯ ಐಪಿಎಲ್‌ ಬಗ್ಗೆ ಧೋನಿ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಿದ್ದಾರೆ. ಅವರ ನಿರ್ಧಾರಕ್ಕೆ ನಾವು ಬದ್ಧ ಮತ್ತು ಅದನ್ನು ನಾವು ಗೌರವಿಸುತ್ತೇವೆ. ಆದರೆ ಅವರು ಮುಂದಿನ ವರ್ಷವೂ ಆಯ್ಕೆಗೆ ಲಭ್ಯವಿರುವ ಭರವಸೆ ನಮಗೆ ಇದೆ’ ಎಂದು ತಿಳಿಸಿದ್ದಾರೆ. ಧೋನಿ ಈ ಬಾರಿ ಸಿಎಸ್‌ಕೆ ಪರ 73 ಎಸೆತಗಳಲ್ಲಿ 161 ರನ್‌ ಸಿಡಿಸಿದ್ದಾರೆ.