ಅನ್ಯಾಯ, ಪಕ್ಷಪಾತ ಧೋರಣೆ: ಸಿನ್ನರ್‌ ನಿಷೇಧ ಅವಧಿ ಕಡಿತ ಬಗ್ಗೆ ಜೋಕೋವಿಚ್‌ ಆಕ್ರೋಶ

| Published : Feb 19 2025, 12:46 AM IST

ಸಾರಾಂಶ

ಸಿನ್ನರ್‌ ಕಳೆದ ವರ್ಷ ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರೂ, ನಿಷೇಧಕ್ಕೊಳಗಾಗಿರಲಿಲ್ಲ. ಇದರ ನಡುವೆ ವಾಡಾ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಿನ್ನರ್‌ ನಿಷೇಧ ಅವಧಿಯನ್ನು 1 ವರ್ಷದಿಂದ 3 ತಿಂಗಳಿಗೆ ಇಳಿಸಿದ್ದಾರೆ.

ದೋಹಾ: ವಿಶ್ವ ನಂ.1 ಟೆನಿಸಿಗ ಯಾನ್ನಿಕ್‌ ಸಿನ್ನರ್‌ ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದರೂ ನಿಷೇಧ ಅವಧಿಯನ್ನು 3 ತಿಂಗಳಿಗೆ ಇಳಿಸಿದ್ದಕ್ಕೆ 24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪಕ್ಪಪಾತ ಧೋರಣೆ ಅನುಸರಿಸಿದ್ದಾರೆ ಎಂಬುದು ಬಹುತೇಕ ಟೆನಿಸಿಗರ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.ಕತಾರ್‌ ಓಪನ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ಬಿಯಾದ ಜೋಕೋ, ‘ವಿಶ್ವ ಉದ್ದೀಪನ ಮದ್ದು ನಿಗ್ರಹ ಘಟಕ(ವಾಡಾ) ಹಾಗೂ ಅಂ.ರಾ. ಟೆನಿಸ್‌ ಸಮಗ್ರತೆ ಏಜೆನ್ಸಿ ಮೇಲೆ ಟೆನಿಸಿಗರು ನಂಬಿಕೆ ಕಳೆದುಕೊಂಡಿದ್ದಾರೆ. ನನಗೆ ಗೊತ್ತಿರುವ ಹಾಗೆ ಬಹುತೇಕ ಟೆನಿಸಿಗರು ಇದರಲ್ಲಿ ಅನ್ಯಾಯ, ಪಕ್ಷಪಾತ ನಡೆದಿದ್ದಾಗಿ ಭಾವಿಸಿದ್ದಾರೆ. ಇದು ಟೆನಿಸ್‌ಗೆ ಉತ್ತಮವಲ್ಲ’ ಎಂದು ಹೇಳಿದ್ದಾರೆ. ಸಿನ್ನರ್‌ ಕಳೆದ ವರ್ಷ ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರೂ, ನಿಷೇಧಕ್ಕೊಳಗಾಗಿರಲಿಲ್ಲ. ಈ ಪ್ರಕರಣ ಸದ್ಯ ನ್ಯಾಯಾಲಯಲ್ಲಿದೆ. ಇದರ ನಡುವೆ ವಾಡಾ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಿನ್ನರ್‌ ನಿಷೇಧ ಅವಧಿಯನ್ನು 1 ವರ್ಷದಿಂದ 3 ತಿಂಗಳಿಗೆ ಇಳಿಸಿದ್ದಾರೆ.