ಸಾರಾಂಶ
ಶಮಿ ಕಳೆದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮೊಹಮದ್ ಶಮಿ ಯಾವುದೇ ಪಂದ್ಯವಾಡಿಲ್ಲ. ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೂ ಅಲಭ್ಯರಾಗಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಬೆಂಗಳೂರು: ದೀರ್ಘಕಾಲದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಭಾರತದ ವೇಗಿ ಮೊಹಮದ್ ಶಮಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೂ ಅಲಭ್ಯರಾಗಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದಕ್ಕೆ ಕಾರಣ ರೋಹಿತ್ ಶರ್ಮಾ ಹೇಳಿಕೆ. ಮಂಗಳವಾರ ನಗರದಲ್ಲಿ ಮಾತನಾಡಿರುವ ಅವರು, ‘ಶಮಿ ಬಗ್ಗೆ ಈಗಲೇ ಹೇಳಲು ಆಗದು. ಆದರೆ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಅವರು ಪುನಃ ಚೇತರಿಸಿಕೊಳ್ಳಬೇಕಿದೆ. ಅವರು ಶೇ.100ರಷ್ಟು ಗುಣಮುಖರಾಗದೆ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿಸಲಾಗದು. ಅವರಿಗೆ ನಾವು ಸಮಯ ನೀಡಬೇಕಾಗಿದೆ’ ಎಂದಿದ್ದಾರೆ. ಶಮಿ ಕಳೆದ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿಲ್ಲ.
2ನೇ ಟೆಸ್ಟ್: ಕಮ್ರನ್ ಶತಕ, ಪಾಕ್ ಮೊದಲ ದಿನ 259/5
ಮುಲ್ತಾನ್: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ದಿನ 5 ವಿಕೆಟ್‌ಗೆ 259 ರನ್ ಕಲೆಹಾಕಿದೆ. ಮಾಜಿ ನಾಯಕ ಬಾಬರ್ ಆಜಂ ಬದಲು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಮ್ರಾನ್ ಗುಲಾಂ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನಸೆಳೆದರು. ಅವರು 224 ಎಸೆತಗಳಲ್ಲಿ 118 ರನ್ ಸಿಡಿಸಿದರು. ಸೈಮ್ ಅಯೂಬ್ 77, ರಿಜ್ವಾನ್ ಔಟಾಗದೆ 37 ರನ್ ಗಳಿಸಿದರು.ಸಹಅಮಿ