ಉತ್ತರ ಪ್ರದೇಶ ಸರ್ಕಾರದಿಂದ ದೀಪ್ತಿ ಶರ್ಮಾಗೆ ಡಿಎಸ್‌ಪಿ ಹುದ್ದೆ

| Published : Jan 31 2024, 02:15 AM IST

ಉತ್ತರ ಪ್ರದೇಶ ಸರ್ಕಾರದಿಂದ ದೀಪ್ತಿ ಶರ್ಮಾಗೆ ಡಿಎಸ್‌ಪಿ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್‌ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಸರ್ಕಾರ ಅಪರ ಪೊಲೀಸ್‌ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಿದೆ.

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್‌ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಸರ್ಕಾರ ಉಪ ಪೊಲೀಸ್‌ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಿದೆ. ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ದೀಪ್ತಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇಮಕಾತಿ ಪತ್ರದೊಂದಿಗೆ ₹3 ಕೋಟಿ ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಟಿ20 ರ್‍ಯಾಂಕಿಂಗ್‌: ದೀಪ್ತಿ ಶರ್ಮಾ ನಂ.2

ದುಬೈ: ಐಸಿಸಿ ಟಿ20 ಮಹಿಳಾ ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ ಅಗ್ರ-10ರ ಪಟ್ಟಿಗೆ ಕಾಲಿಟ್ಟಿದ್ದಾರೆ. ಒಂದು ಸ್ಥಾನ ಏರಿಕೆ ಕಂಡಿರುವ ದೀಪ್ತಿ 2ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂಧನಾ 4ನೇ ಸ್ಥಾನದಲ್ಲಿ ಮುಂದುವರಿದಿದ್ದು, ಜೆಮಿಮಾ, ಶಫಾಲಿ ಹಾಗೂ ಹರ್ಮನ್‌ಪ್ರೀತ್‌ ಕ್ರಮವಾಗಿ 13, 16 ಹಾಗೂ 17ನೇ ಸ್ಥಾನಗಳಲ್ಲೇ ಇದ್ದಾರೆ.