ಆರ್‌ಸಿಬಿಯ ಸತತ ಸೋಲಿಗೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟ ನಾಯಕ ಫಾಫ್‌ ಡು ಪ್ಲೆಸಿ. ಸರಿಯಾದ ಬೌಲರ್‌ಗಳೇ ಇಲ್ಲ, ಗೆಲ್ಲೋದು ಹೇಗೆ? ಎಂದ ಫಾಫ್‌. 2025ರ ಮೆಗಾ ಹರಾಜಿಗೂ ಮುನ್ನ ಸ್ಫೋಟಕ ಹೇಳಿಕೆ.

ಮುಂಬೈ: 5 ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿ, ತಂಡದಲ್ಲಿರುವ ಪ್ರಮುಖ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

 ‘ನಮ್ಮಲ್ಲಿ ಬೌಲಿಂಗ್‌ ಅಸ್ತ್ರಗಳ ಕೊರತೆ ಇದೆ. ಬ್ಯಾಟಿಂಗ್‌ ಪಡೆಯ ಮೇಲೆ ಹೆಚ್ಚು ಅವಲಂಬಿಸಬೇಕಾದ ಪರಿಸ್ಥಿತಿ ಇದ್ದು, ಪ್ರತಿ ಪಂದ್ಯದಲ್ಲೂ 220ಕ್ಕಿಂತ ಹೆಚ್ಚಿನ ರನ್‌ ಗಳಿಸಬೇಕಾದ ಸ್ಥಿತಿಯಲ್ಲಿದ್ದೇವೆ’ ಎಂದು ಡು ಪ್ಲೆಸಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿದೆ.2027ರ ವಿಶ್ವಕಪ್‌ ಆಡುವ ಇಚ್ಛೆ ಇದೆ: ರೋಹಿತ್‌!

ನವದೆಹಲಿ: ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ, 2027ರ ಏಕದಿನ ವಿಶ್ವಕಪ್‌ ಆಡುವ ಇಚ್ಛೆ ಇದೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಈ ವರ್ಷ ಟಿ20 ವಿಶ್ವಕಪ್‌ ಬಳಿಕ ರೋಹಿತ್‌ ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಈ ಸಂಬಂಧ ಅವರು ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಿವೃತ್ತಿ ಬಗ್ಗೆ ಯೋಚಿಸಿಲ್ಲ. ನಾನು ಎಲ್ಲಿಯ ತನಕ ಆಡ ಬಹುದು ಎಂದು ಗೊತ್ತಿಲ್ಲ. ಸದ್ಯಕ್ಕೆ ಉತ್ತಮವಾಗಿ ಆಡುತ್ತಿದ್ದೇನೆ. ಏಕದಿನ ವಿಶ್ವಕಪ್‌ ಗೆಲ್ಲಬೇಕು ಎನ್ನುವ ಕನಸಿದೆ’ ಎಂದು ರೋಹಿತ್‌ ಹೇಳಿದ್ದಾರೆ.