ಸಾರಾಂಶ
ದೇಸಿ ಕ್ರಿಕೆಟ್‌ನ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಯು ತನ್ನ ಆಟಗಾರರನ್ನು ಐಪಿಎಲ್ ಹೊರತುಪಡಿಸಿ ಬೇರೆ ಫ್ರಾಂಚೈಸಿ ಲೀಗ್‌ನಲ್ಲಿ ಆಡುವುದಕ್ಕೆ ನಿಷೇಧ ಹೇರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲಂಡನ್: ದೇಸಿ ಕ್ರಿಕೆಟ್‌ನ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಯು ತನ್ನ ಆಟಗಾರರನ್ನು ಐಪಿಎಲ್ ಹೊರತುಪಡಿಸಿ ಬೇರೆ ಫ್ರಾಂಚೈಸಿ ಲೀಗ್‌ನಲ್ಲಿ ಆಡುವುದಕ್ಕೆ ನಿಷೇಧ ಹೇರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ದೇಸಿ ಟೂರ್ನಿ ನಡೆಯುತ್ತಿರುವ ವೇಳೆ ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ತನ್ನ ಆಟಗಾರರಿಗೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡದಿರಲು ಇಸಿಬಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ಆಟಗಾರರು ದ್ವಿಪಕ್ಷೀಯ ಸರಣಿ, ದೇಸಿ ಟೂರ್ನಿ ವೇಳೆ ವಿದೇಶಿ ಲೀಗ್‌ಗಳಲ್ಲಿ ಆಡುತ್ತಿದ್ದ ಕಾರಣ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಕೇಂದ್ರೀಯ ಗುತ್ತಿಗೆ ತಿರಸ್ಕರಿಸಿ ವಿದೇಶಿ ಲೀಗ್‌ಗಳಲ್ಲಿ ಆಡಲು ತೆರಳುವ ಆಟಗಾರರಿಗೂ ಕಡಿವಾಣ ಹಾಕಲು ಇಸಿಬಿ ನಿರ್ಧರಿಸಿದೆ.