ಸಾರಾಂಶ
ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವಶ್ಯಕತೆ ಬಿದ್ದರೆ ವೇಗದ ಬೌಲರ್ರೇ ಇಲ್ಲದೆ ಆಡಲು ನಾವು ಸಿದ್ಧ. ಬರೀ ಸ್ಪಿನ್ನರ್‌ಗಳನ್ನೇ ಆಡಿಸಲು ಹೆದರಲ್ಲವೆಂದು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಹೇಳಿದ್ದಾರೆ.
ವಿಶಾಖಪಟ್ಟಣಂ: ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವಶ್ಯಕತೆ ಬಿದ್ದರೆ ವೇಗದ ಬೌಲರ್ರೇ ಇಲ್ಲದೆ ಆಡಲು ನಾವು ಸಿದ್ಧ ಎಂದು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ ಒಬ್ಬ ವೇಗಿಯನ್ನು ಆಡಿಸಿದ್ದ ನಾವು, ಇಲ್ಲಿನ ಎಸಿಎ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿ ಎನಿಸಿದರೆ ವೇಗಿಯನ್ನು ಹೊರಗಿಟ್ಟು ಮತ್ತೊಬ್ಬ ಸ್ಪಿನ್ನರನ್ನು ಆಡಿಸಲು ಸಿದ್ಧ ಎಂದಿದ್ದಾರೆ.
ಹೈದರಾಬಾದ್‌ನಲ್ಲಿ ಮಾರ್ಕ್ ವುಡ್ ಇಂಗ್ಲೆಂಡ್ ತಂಡದಲ್ಲಿದ್ದ ಏಕೈಕ ವೇಗಿ. ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ರೆಹಾನ್ ಅಹ್ಮದ್, ಶೋಯಿಬ್ ಬಶೀರ್ ಆಡುವ ಸಾಧ್ಯತೆ ಇದೆ. ಜೋ ರೂಟ್ 5ನೇ ಬೌಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ‘ಕೆಲವೊಮ್ಮೆ ಆಟಗಾರರ ಆಯ್ಕೆಯಲ್ಲಿ ಹೆಚ್ಚು ಧೈರ್ಯ ತೋರಬೇಕಾಗುತ್ತದೆ. ಆಟಗಾರರ ಕೌಶಲ್ಯದಲ್ಲಿ ವಿಶ್ವಾಸವಿಟ್ಟು ಅವಕಾಶ ನೀಡಬೇಕಾಗುತ್ತದೆ. ವಿಶಾಖಪಟ್ಟಣಂನ ಪಿಚ್ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾಗಿದೆ ಎನಿಸಿದರೆ, ಬರೀ ಸ್ಪಿನ್ನರ್‌ಗಳನ್ನೇ ಆಡಿಸಲು ಹಿಂದೇಟು ಹಾಕುವುದಿಲ್ಲ’ ಎಂದು ಮೆಕ್ಕಲಂ ಭಾರತಕ್ಕೆ ಸವಾಲೆಸೆದಿದ್ದಾರೆ.