ಸಾರಾಂಶ
7 ಬಾರಿ ಫಾರ್ಮುಲಾ-1 ಚಾಂಪಿಯನ್, ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್‌ವೊಂದನ್ನು ಉಚ್ಚರಿಸಿದ್ದು, ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಂಡನ್: 7 ಬಾರಿ ಫಾರ್ಮುಲಾ-1 ಚಾಂಪಿಯನ್, ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ ಅವರ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿರುವ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಹ್ಯಾಮಿಲ್ಟನ್‌ರನ್ನು ಭೇಟಿಯಾಗಿರುವ ಯುವತಿಯೊಬ್ಬರು ‘ಗುಡ್ ಲಕ್’ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಫಲಕವೊಂದನ್ನು ಹ್ಯಾಮಿಲ್ಟನ್ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು, ಈ ಪದವನ್ನು ಹ್ಯಾಮಿಲ್ಟನ್ ಬಾಯಿಯಿಂದ ಹೇಳಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ. ‘ಒಳ್ಳೆಯದಾಗಲಿ’ ಎಂದು ಉಚ್ಚರಿಸಿರುವ ಹ್ಯಾಮಿಲ್ಟನ್, ಇದು ನನ್ನ ಬಾಯಲ್ಲಿ ಬಂದ ಮೊದಲ ಕನ್ನಡ ಪದ ಎಂದು ಖುಷಿ ಪಟ್ಟಿದ್ದಾರೆ.
ವಿಶ್ವ ಒಳಾಂಗಣ ಅಥ್ಲೆಟಿಕ್ಸ್: ಜೆಸ್ವಿನ್‌ಗೆ 13ನೇ ಸ್ಥಾನ
ಗ್ಲಾಸ್ಗೋ: ರಾಷ್ಟ್ರೀಯ ದಾಖಲೆ ಹೊಂದಿರುವ ಲಾಂಗ್ ಜಂಪ್ ಪಟು ಜೆಸ್ವಿನ್ ಆ್ಯಲ್ಡ್ರಿನ್ ಇಲ್ಲಿ ನಡೆಯುತ್ತಿರುವ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಕೂಟದಲ್ಲಿ 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 7.69 ಮೀ. ದೂರಕ್ಕೆ ನೆಗೆಯಲಷ್ಟೇ ಶಕ್ತರಾದರು. ಮೊದಲ ಯತ್ನದ ಬಳಿಕ ನಂತರದ 2 ಯತ್ನಗಳನ್ನು ಫೌಲ್ ಮಾಡಿದ ಜೆಸ್ವಿನ್ ಅಗ್ರ-8ರಲ್ಲಿ ಉಳಿಯಲು ಸಾಧ್ಯವಾಗದೆ ಸ್ಪರ್ಧೆಯಿಂದ ಹೊರಬಿದ್ದರು. ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರವೀಣ್ ಚಿತ್ರವೇಲ್ ಸಹ ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.