ನಿರ್ಣಾಯಕ ಪಂದ್ಯ ಗೆಲ್ಲಲು ಮುಂಬೈ vs ಕಿಂಗ್ಸ್‌ ಸೆಣಸಾಟ

| Published : Apr 18 2024, 02:22 AM IST / Updated: Apr 18 2024, 04:23 AM IST

ಸಾರಾಂಶ

ಪ್ಲೇ-ಆಪ್‌ ರೇಸಲ್ಲಿ ಉಳಿಯಲು ಇತ್ತಂಡಕ್ಕೂ ಗೆಲುವು ಅನಿವಾರ್ಯ. ಎರಡೂ ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದು, ತಲಾ 2 ಗೆಲುವು ಸಾಧಿಸಿವೆ.

ಮುಲ್ಲಾನ್‌ಪುರ: ಸತತ ಸೋಲುಗಳಿಂದ ಕಂಗೆಟ್ಟಿದ್ದಲ್ಲದೇ, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಗೆಲುವು ಅನಿವಾರ್ಯ ಎಂಬ ಸ್ಥಿತಿಗೆ ತಲುಪಿರುವ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಗುರುವಾರ ಪರಸ್ಪರ ಮುಖಾಮುಖಿಯಾಗಲಿವೆ. 

ಎರಡೂ ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದು, ತಲಾ 2 ಗೆಲುವು ಸಾಧಿಸಿವೆ. ಮತ್ತೊಂದು ಸೋಲು ಪ್ಲೇ-ಆಫ್‌ ಹಾದಿಯಿಂದ ಮತ್ತಷ್ಟು ದೂರವಾಗಿಸಲಿದೆ. ಅಲ್ಲದೆ ನೆಟ್‌ ರನ್‌ರೇಟ್‌ ಕೂಡಾ ಹೆಚ್ಚಿಸುವತ್ತ ಇತ್ತಂಡಗಳೂ ಗಮನ ಹರಿಸಬೇಕಿದೆ. 

ಪಂಜಾಬ್ ತಂಡಕ್ಕೆ ನಾಯಕ ಶಿಖರ್‌ ಧವನ್‌ ಅನುಪಸ್ಥಿತಿ ಕಾಡಲಿದ್ದು, ಬ್ಯಾಟಿಂಗ್‌ ಜೊತೆ ಬೌಲಿಂಗ್‌ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.ಮತ್ತೊಂದೆಡೆ ಸತತ 2 ಗೆಲುವಿನ ಹುಮ್ಮಸ್ಸಿನಲ್ಲಿದ್ದ ಮುಂಬೈಗೆ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ತವರಿನಲ್ಲೇ ಆಘಾತಕಾರಿ ಸೋಲು ಎದುರಾಗಿತ್ತು. ನಾಯಕ ಹಾರ್ದಿಕ್‌ ಪಾಂಡ್ಯ ತಮ್ಮ ನಾಯಕತ್ವದ ಜೊತೆಗೆ ಆಟದಲ್ಲೂ ಮಿಂಚಬೇಕಿದೆ.

ಒಟ್ಟು ಮುಖಾಮುಖಿ: 31ಮುಂಬೈ: 16ಪಂಜಾಬ್‌: 15

ಸಂಭವನೀಯ ಆಟಗಾರರ ಪಟ್ಟಿಮುಂಬೈ: ರೋಹಿತ್‌, ಇಶಾನ್‌, ತಿಲಕ್‌ ವರ್ಮಾ, ಹಾರ್ದಿಕ್‌(ನಾಯಕ), ಟಿಮ್‌ ಡೇವಿಡ್‌, ನಬಿ, ಶೆಫರ್ಡ್‌, ಶ್ರೇಯಸ್‌, ಕೋಟ್ಜೀ, ಬೂಮ್ರಾ, ಆಕಾಶ್‌.ಪಂಜಾಬ್‌: ಬೇರ್‌ಸ್ಟೋವ್‌, ಅಥರ್ವ, ಪ್ರಭ್‌ಸಿಮ್ರನ್‌, ಕರ್ರನ್‌(ನಾಯಕ), ಲಿಯಾಮ್‌, ಜಿತೇಶ್‌, ಶಶಾಂಕ್‌, ಹರ್‌ಪ್ರೀತ್‌, ಹರ್ಷಲ್‌, ಅರ್ಶ್‌ದೀಪ್‌, ರಬಾಡ.

ಪಂದ್ಯ: ಸಂಜೆ 7.30ಕ್ಕೆ