ಮೊದಲ ಟೆಸ್ಟ್‌: ದಾಖಲೆ ಬರೆದ ವಿಲಿಯಮ್ಸನ್‌, ದ.ಆಫ್ರಿಕಾ ವಿರುದ್ಧ ಕಿವೀಸ್‌ ಪರಾಕ್ರಮ

| Published : Feb 07 2024, 01:50 AM IST / Updated: Feb 07 2024, 01:03 PM IST

Kane Williamson
ಮೊದಲ ಟೆಸ್ಟ್‌: ದಾಖಲೆ ಬರೆದ ವಿಲಿಯಮ್ಸನ್‌, ದ.ಆಫ್ರಿಕಾ ವಿರುದ್ಧ ಕಿವೀಸ್‌ ಪರಾಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಪರಾಕ್ರಮ ಮೆರೆದಿದ್ದು, ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಕಿವೀಸ್‌ನ 511 ರನ್‌ಗೆ ಉತ್ತರವಾಗಿ ಮಂಗಳವಾರ ದ.ಆಫ್ರಿಕಾ ಕೇವಲ 162 ರನ್‌ಗೆ ಆಲೌಟಾಯಿತು.

ಮೌಂಟ್‌ ಮಾಂಗನುಯಿ(ನ್ಯೂಜಿಲೆಂಡ್‌): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಪರಾಕ್ರಮ ಮೆರೆದಿದ್ದು, ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಕಿವೀಸ್‌ನ 511 ರನ್‌ಗೆ ಉತ್ತರವಾಗಿ ಮಂಗಳವಾರ ದ.ಆಫ್ರಿಕಾ ಕೇವಲ 162 ರನ್‌ಗೆ ಆಲೌಟಾಯಿತು. 

ಮೊದಲ ಇನ್ನಿಂಗ್ಸ್‌ನಲ್ಲಿ 349 ರನ್‌ಗಳ ದೊಡ್ಡ ಮುನ್ನಡೆ ಪಡೆದರೂ ದ.ಆಫ್ರಿಕಾ ಮೇಲೆ ಫಾಲೋ ಆನ್‌ ಹೇರದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿದೆ. 2ನೇ ಇನ್ನಿಂಗ್ಸಲ್ಲೂ ಕೇನ್‌ ವಿಲಿಯಮ್ಸನ್‌(109 ರನ್) ಶತಕ ಸಿಡಿಸಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದೆ. 

ಟೆಸ್ಟ್‌ನಲ್ಲಿ 31ನೇ ಶತಕಸಿಡಿಸಿದ ವಿಲಿಯಮ್ಸನ್: ನ್ಯೂಜಿಲೆಂಡ್‌ನ ತಾರಾ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌ ಟೆಸ್ಟ್‌ ಕ್ರಿಕೆಟ್‌ನ ಶತಕ ಗಳಿಕೆಯನ್ನು 31ಕ್ಕೆ ಏರಿಸಿದ್ದಾರೆ. ಮಂಗಳವಾರ ದ.ಆಫ್ರಿಕಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲಿ ಕೇನ್‌ 109 ರನ್‌ ಕಲೆ ಹಾಕಿದರು. 

ಇದರೊಂದಿಗೆ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಚಂದ್ರಪಾಲ್‌, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌, ಇಂಗ್ಲೆಂಡ್‌ನ ಜೋ ರೂಟ್‌ರನ್ನು ಹಿಂದಿಕ್ಕಿದರು. ಇವರೆಲ್ಲರೂ ತಲಾ 30 ಶತಕ ಬಾರಿಸಿದ್ದಾರೆ. 

ಒಟ್ಟಾರೆ ವಿಲಿಯಮ್ಸನ್‌ ಗರಿಷ್ಠ ಶತಕ ಗಳಿಕೆದಾರರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್‌ 51 ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.