ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಲಖನೌ vs ಡೆಲ್ಲಿ ಸೆಣಸಾಟ

| Published : May 14 2024, 01:15 AM IST / Updated: May 14 2024, 04:16 AM IST

ಸಾರಾಂಶ

ಡೆಲ್ಲಿಗೆ ಕೊನೆ ಚಾನ್ಸ್‌. ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಕ್ಕೆ. ಲಖನೌಗೆ ರೇಸಲ್ಲಿ ಉಳಿಯುವ ತವಕ. ಸೋತರೆ ಪ್ಲೇ-ಆಫ್‌ ಕನಸು ಬಹುತೇಕ ಭಗ್ನ.

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿರುವ 2 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಮಂಗಳವಾರ ಪರಸ್ಪರ ಸೆಣಸಾಡಲಿವೆ.

 2 ತಂಡಕ್ಕೂ ಈ ಪಂದ್ಯ ನಿರ್ಣಾಯಕವೆನಿಸಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.ಡೆಲ್ಲಿ 13 ಪಂದ್ಯಗಳನ್ನಾಡಿದ್ದು. 12 ಅಂಕ ಸಂಪಾದಿಸಿದೆ. ತಂಡಕ್ಕಿದು ಕೊನೆ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದು, ಚೆನ್ನೈ, ಹೈದರಾಬಾದ್‌ ಹಾಗೂ ಆರ್‌ಸಿಬಿ ತಂಡಗಳನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಲು ಸಾಧ್ಯವಾದರೆ ಮಾತ್ರ ಪ್ಲೇ-ಆಫ್‌ರೇಸ್‌ನಲ್ಲಿ ಜೀವಂತವಾಗಿ ಉಳಿಯಲಿದೆ. 

ಸೋತರೆ ಅಧಿಕೃತವಾಗಿ ಹೊರಬೀಳಲಿದೆ.ಅತ್ತ ಲಖನೌ 12ರಲ್ಲಿ 6 ಗೆದ್ದು 12 ಅಂಕ ಸಂಪಾದಿಸಿದೆ. ಉಳಿದಿರುವ 2 ಪಂದ್ಯ ಗೆದ್ದರೆ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. 1 ಪಂದ್ಯ ಸೋತರೂ ತಂಡಕ್ಕೆ ಹಿನ್ನಡೆಯಾಗಲಿದ್ದು, ಆಗ ಚೆನ್ನೈ ಹಾಗೂ ಆರ್‌ಸಿಬಿಯ ಪ್ಲೇ-ಆಫ್‌ ಹಾದಿ ಸುಗಮವಾಗಲಿದೆ. ಸದ್ಯ ಎಲ್ಲರ ಚಿತ್ತ ಕೆ.ಎಲ್‌.ರಾಹುಲ್‌ ಮೇಲಿದ್ದು, ಡೆಲ್ಲಿ ವಿರುದ್ಧ ಲಖನೌ ತಂಡವನ್ನು ಮುನ್ನಡೆಸುತ್ತಾರೊ ಅಥವಾ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯುತ್ತಾರೊ ಎಂಬ ಕುತೂಹಲವಿದೆ.

ಒಟ್ಟು ಮುಖಾಮುಖಿ: 04

ಡೆಲ್ಲಿ: 01ಲಖನೌ: 03

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಜೇಕ್ ಫ್ರೇಸರ್‌, ಪೊರೆಲ್‌, ಹೋಪ್‌, ರಿಷಭ್‌(ನಾಯಕ), ಸ್ಟಬ್ಸ್‌, ಅಕ್ಷರ್‌, ಕುಲ್ದೀಪ್‌, ರಾಸಿಕ್‌, ಮುಕೇಶ್‌, ಇಶಾಂತ್‌, ಖಲೀಲ್‌. ಲಖನೌ: ಡಿ ಕಾಕ್‌, ರಾಹುಲ್‌(ನಾಯಕ), ಸ್ಟೋಯ್ನಿಸ್‌, ಪೂರನ್‌, ಹೂಡಾ, ಬದೋನಿ, ಕೃನಾಲ್‌, ಗೌತಮ್‌, ಯಶ್‌, ರವಿ, ನವೀನ್‌.

ಪಂದ್ಯ: ಸಂಜೆ 7.30ಕ್ಕೆ