ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ನರಸಿಂಗ್‌ ಮುಖ್ಯಸ್ಥ

| Published : Apr 25 2024, 01:08 AM IST / Updated: Apr 25 2024, 04:10 AM IST

ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ನರಸಿಂಗ್‌ ಮುಖ್ಯಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ಕುಸ್ತಿಪಟು ನರಸಿಂಗ್‌ ಯಾದವ್‌ ಮುಖ್ಯಸ್ಥ. ಸಮಿತಿ ರಚನೆ ಮಾಡುವಂತೆ ಭಾರತೀಯ ಕುಸ್ತಿ ಫೆಡರೇಶನ್‌ಗೆ ಸೂಚಿಸಿದ್ದ ವಿಶ್ವ ಕುಸ್ತಿ ಒಕ್ಕೂಟ. ನರಸಿಂಗ್‌ ಸೇರಿ ಒಟ್ಟು 7 ಮಂದಿ ಸಮಿತಿಗೆ ಆಯ್ಕೆ.

ವಾರಾಣಸಿ: ಮಾಜಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ನರಸಿಂಗ್‌ ಯಾದವ್‌, ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನ ಅಥ್ಲೀಟ್ಸ್‌ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 

ಬುಧವಾರ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದರು. ಚುನಾಯಿತ 7 ಮಂದಿಯ ಪೈಕಿ ನರಸಿಂಗ್‌ರನ್ನು ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ನಿಷೇಧ ತೆರವುಗೊಳಿಸುವಾಗ, ಅಥ್ಲೀಟ್‌ಗಳ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. 

ದೇಶದ ಕುಸ್ತಿಪಟುಗಳು ತಮ್ಮ ಸಮಸ್ಯೆಗಳನ್ನು ಅಥ್ಲೀಟ್ಸ್‌ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬಹುದು. ಈ ಸಮಿತಿಗೆ ದೆಹಲಿಯ ಸಾಹಿಲ್‌, ಕೇರಳದ ಸ್ಮಿತಾ ಎ.ಎಸ್‌., ಉ.ಪ್ರದೇಶದ ಭಾರತಿ, ಗುಜರಾತ್‌ನ ಖುಷ್ಬೂ ಪವಾರ್‌, ಹರ್ಯಾಣದ ನಿಕ್ಕಿ ಹಾಗೂ ಬಂಗಾಳದ ಶ್ವೇತಾ ದುಬೆ ಆಯ್ಕೆಯಾಗಿದ್ದಾರೆ.