ಬೆಂಗ್ಳೂರು ಓಪನ್‌ಗೆ ಮಾಜಿ ವಿಶ್ವ ನಂ.25 ಪಾಸ್ಪಿಸಿಲ್‌

| Published : Feb 10 2024, 01:46 AM IST

ಸಾರಾಂಶ

ಫೆ.12ರಿಂದ 18ರ ವರೆಗೂ ನಡೆಯಲಿರುವ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಾಜಿ ವಿಶ್ವ ನಂ.25 ಕೆನಡಾದ ವಸೆಕ್‌ ಪಾಸ್ಪಿಸಿಲ್‌ ಆಡಲಿದ್ದಾರೆ.

ಬೆಂಗಳೂರು: ಫೆ.12ರಿಂದ 18ರ ವರೆಗೂ ನಡೆಯಲಿರುವ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಾಜಿ ವಿಶ್ವ ನಂ.25 ಕೆನಡಾದ ವಸೆಕ್‌ ಪಾಸ್ಪಿಸಿಲ್‌ ಆಡಲಿದ್ದಾರೆ. ಅವರಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ನೀಡಿರುವುದಾಗಿ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ. ಪಾಸ್ಪಿಸಿಲ್‌ 2014ರಲ್ಲಿ ಅಮೆರಿಕದ ಜಾಕ್‌ ಸಾಕ್‌ ಜೊತೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂನ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿದ್ದರು. 2015ರ ವಿಂಬಲ್ಡನ್‌ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. 2014ರಲ್ಲಿ ಪಾಸ್ಪಿಸಿಲ್‌ ವಿಶ್ವ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ 25ನೇ, 2015ರಲ್ಲಿ ಡಬಲ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದರು. ಭಾರತದಲ್ಲಿ ಶುರುವಾಗಲಿದೆಐಪಿಎಲ್‌ ರೀತಿ ರಗ್ಬಿ ಲೀಗ್‌ನವದೆಹಲಿ: ಭಾರತೀಯ ರಗ್ಬಿ ಫುಟ್ಬಾಲ್‌ ಒಕ್ಕೂಟ (ಐಆರ್‌ಎಫ್‌ಯು) 2024ರಲ್ಲಿ ಐಪಿಎಲ್‌ ಮಾದರಿಯಲ್ಲಿ ರಗ್ಬಿ ಪ್ರೀಮಿಯರ್‌ ಲೀಗ್‌ (ಆರ್‌ಪಿಎಲ್‌) ಆರಂಭಿಸುವುದಾಗಿ ಘೋಷಿಸಿದೆ. ರಗ್ಬಿ ಸೆವೆನ್ಸ್‌ ಮಾದರಿಯ ಟೂರ್ನಿಯಲ್ಲಿ ಭಾರತ ಹಾಗೂ ಅಂತಾರಾಷ್ಟ್ರೀಯ ತಾರೆಯರು ಪಾಲ್ಗೊಳ್ಳಲಿದ್ದು, ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಉದ್ಘಾಟನಾ ಆವೃತ್ತಿಯಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ.