ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಿಗಣೆ ಕಾಟದ ಭೀತಿ!

| Published : Oct 06 2023, 01:15 AM IST

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಿಗಣೆ ಕಾಟದ ಭೀತಿ!
Share this Article
  • FB
  • TW
  • Linkdin
  • Email

ಸಾರಾಂಶ

ತಿಗಣೆಗಳ ನಾಶಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ
ಪ್ಯಾರಿಸ್‌: 2024ರ ಒಲಿಂಪಿಕ್ಸ್‌ಗೆ ಇನ್ನು ಕೇವಲ 9 ತಿಂಗಳು ಬಾಕಿ ಇದೆ. ಆದರೆ ಆಯೋಜಕರಿಗೆ ಹೊಸ ಸಮಸ್ಯೆ ಶುರುವಾಗಿದೆ. ದೇಶಾದ್ಯಂತ ಇತ್ತೀಚೆಗೆ ತಿಗಣೆ ಕಾಟ ಹೆಚ್ಚಾಗಿದ್ದು, ಇದರಿಂದ ಒಲಿಂಪಿಕ್ಸ್‌ ಸಿದ್ಧತೆಗೂ ಹಿನ್ನಡೆಯಾಗುವ ಭೀತಿಯಿಂದ ಶುಕ್ರವಾರ ಫ್ರಾನ್ಸ್‌ನ ಪ್ರಧಾನ ಮಂತ್ರಿ ಎಲಿಸೆಬೆತ್‌ ಬೊರ್ನ್‌ ಉನ್ನತ ಮಟ್ಟದ ಅಧಿಕಾರಿಗಳ ತುರ್ತು ಸಭೆ ಕರೆದು, ತಿಗಣೆಗಳ ನಾಶಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.