ಅಮಿತ್‌ ಶಾ ಭೇಟಿಯಾದ ಗಂಭೀರ್‌: ಟೀಂ ಇಂಡಿಯಾ ಕೋಚ್‌ ಆಗುವುದು ಖಚಿತ?

| Published : Jun 18 2024, 12:51 AM IST / Updated: Jun 18 2024, 04:35 AM IST

ಅಮಿತ್‌ ಶಾ ಭೇಟಿಯಾದ ಗಂಭೀರ್‌: ಟೀಂ ಇಂಡಿಯಾ ಕೋಚ್‌ ಆಗುವುದು ಖಚಿತ?
Share this Article
  • FB
  • TW
  • Linkdin
  • Email

ಸಾರಾಂಶ

ಟೀಂ ಇಂಡಿಯಾದ ಹೊಸ ಕೋಚ್‌ ಎಂದೇ ಕರೆಸಿಕೊಳ್ಳುತ್ತಿರುವ ಗೌತಮ್‌ ಗಂಭೀರ್‌ರಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ. ದೊಡ್ಡ ಹುದ್ದೆ ಅಲಂಕರಿಸುವ ಮುನ್ನ ಶಾ ಅಶೀರ್ವಾದ ಪಡೆದ್ರಾ ಗಂಭೀರ್‌?. ಹೊಸ ಫೀಲಂಗ್‌ ಕೋಚ್‌ ಆಗ್ತಾರಾ ಜಾಂಟಿ ರೋಡ್ಸ್‌.

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಐಪಿಎಲ್‌ನ ಕೆಕೆಆರ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್‌, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. 

ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಗಂಭೀರ್‌ ನೇಮಕಗೊಳ್ಳುವುದು ಖಚಿತವಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂದು ಸುದ್ದಿಯಾಗಿರುವ ಬೆನ್ನಲ್ಲೇ ಅಮಿತ್‌ ಶಾ ಅವರನ್ನು ಗಂಭೀರ್‌ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಿಂಗಳಾಂತ್ಯಕ್ಕೆ ಹೊಸ ಕೋಚ್‌ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಟೀಂ ಇಂಡಿಯಾಗೆ ಜಾಂಟಿ ರೋಡ್ಸ್‌ ಫೀಲ್ಡಿಂಗ್‌ ಕೋಚ್‌?ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನೂತನ ಫೀಲ್ಡಿಂಗ್‌ ಕೋಚ್‌ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಪ್ರಚಂಡ ಫೀಲ್ಡರ್‌ ಎಂದೇ ಗುರುತಿಸಿಕೊಂಡಿದ್ದ ಜಾಂಟಿ ರೋಡ್ಸ್‌ ನೇಮಕಗೊಳ್ಳಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

019ರಲ್ಲಿ ರೋಡ್ಸ್‌, ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದರಾದರೂ, ಅವರನ್ನು ಬಿಸಿಸಿಐ ಪರಿಗಣಿಸಿರಲಿಲ್ಲ. ಆದರೆ, ಇದೀಗ ಗಂಭೀರ್‌ ಹೊಸ ಕೋಚ್‌ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಅವರೊಂದಿಗೆ ಐಪಿಎಲ್‌ನ ಲಖನೌ ತಂಡದಲ್ಲಿ ಕೆಲಸ ಮಾಡಿದ ರೋಡ್ಸ್‌ರನ್ನು ನೇಮಕ ಮಾಡುವಂತೆ ಬಿಸಿಸಿಐಗೆ ಕೇಳಲಿದ್ದಾರೆ ಎಂದು ಹೇಳಲಾಗಿದೆ.