ಗಿಲ್‌ ಅಬ್ಬರಕ್ಕೆ ಮತ್ತಷ್ಟು ದಾಖಲೆ ಬ್ರೇಕ್‌

| N/A | Published : Jul 28 2025, 12:31 PM IST

Shhubman Gill

ಸಾರಾಂಶ

ವಿದೇಶಿ ಸರಣಿಯಲ್ಲಿ 700+ ರನ್‌ ಗಳಿಸಿದ 2ನೇ ಭಾರತೀಯ ಬ್ಯಾಟರ್‌ಸರಣಿಯೊಂದರಲ್ಲಿ 4 ಸೆಂಚುರಿ ಬಾರಿಸಿದ ವಿಶ್ವದ 3ನೇ ನಾಯಕ ಗಿಲ್‌

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಸರಣಿಯಲ್ಲಿ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿರುವ ಭಾರತದ ನಾಯಕ ಶುಭ್‌ಮನ್‌ ಗಿಲ್‌ ಮತ್ತಷ್ಟು ದಾಖಲೆ ಬರೆದಿದ್ದಾರೆ.

ಅವರು 4ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 103 ರನ್‌ ಗಳಿಸಿದ್ದು, ಸರಣಿಯ ಒಟ್ಟು ಗಳಿಕೆಯನ್ನು 722ಕ್ಕೆ ಹೆಚ್ಚಿಸಿದ್ದಾರೆ. ಈ ಮೂಲಕ ವಿದೇಶಿ ಟೆಸ್ಟ್‌ ಸರಣಿಯೊಂದರಲ್ಲಿ 700+ ರನ್‌ ಗಳಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. 1971ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಸರಣಿಯಲ್ಲಿ ಭಾರತದ ನಾಯಕರಾಗಿ ಸುನಿಲ್‌ ಗವಾಸ್ಕರ್‌ 774 ರನ್‌ ಗಳಿಸಿದ್ದರು. ಒಟ್ಟಾರೆ ಒಂದು ಸರಣಿಯಲ್ಲಿ 700+ ರನ್‌ ಗಳಿಸಿದ ಭಾರತದ 3ನೇ ಬ್ಯಾಟರ್‌. ಗವಾಸ್ಕರ್‌ 1978-79ರಲ್ಲಿ ವಿಂಡೀಸ್‌ ವಿರುದ್ಧ 732 ರನ್‌ ಗಳಿಸಿದರೆ, ಯಶಸ್ವಿ ಜೈಸ್ವಾಲ್‌ 2024ರಲ್ಲಿ ಇಂಗ್ಲೆಂಡ್‌ ವಿರುದ್ಧ 712 ರನ್‌ ಗಳಿಸಿದ್ದರು. ಇವೆರಡೂ ತವರಿನ ಸರಣಿಯಲ್ಲಿ ದಾಖಲಾಗಿವೆ.

4 ಶತಕ: ಸರಣಿವೊಂದರಲ್ಲಿ 4 ಶತಕ ಬಾರಿಸಿದ ವಿಶ್ವದ 3ನೇ ನಾಯಕ ಗಿಲ್‌. 1947/48ರಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌, 1978/79ರಲ್ಲಿ ವಿಂಡೀಸ್‌ ವಿರುದ್ಧ ಸುನಿಲ್‌ ಗವಾಸ್ಕರ್‌ ಈ ಸಾಧನೆ ಮಾಡಿದ್ದರು.

ಇನ್ನು, ಟೆಸ್ಟ್‌ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಗಿಲ್‌(722 ರನ್‌) 2ನೇ ಸ್ಥಾನಕ್ಕೇರಿದ್ದಾರೆ. 1936-37ರಲ್ಲಿ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ಇಂಗ್ಲೆಂಡ್‌ ವಿರುದ್ಧ 810 ರನ್ ಗಳಿಸಿದ್ದರು.

01ನೇ ನಾಯಕ

ನಾಯಕತ್ವದ ಚೊಚ್ಚಲ ಸರಣಿಯಲ್ಲಿ 4 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಶುಭ್‌ಮನ್‌ ಗಿಲ್‌.

ಟೆಸ್ಟ್‌ ಸರಣಿಯಲ್ಲಿ ಭಾರತೀಯರ ಗರಿಷ್ಠ ರನ್‌

ಆಟಗಾರ ರನ್ ಪಂದ್ಯ ಎದುರಾಳಿ ವರ್ಷ

ಗವಾಸ್ಕರ್‌ 774 4 ವಿಂಡೀಸ್‌ 1970/71

ಗವಾಸ್ಕರ್‌ 732 6 ವಿಂಡೀಸ್‌ 1978/79

ಶುಭ್‌ಮನ್‌ 722* 4* ಇಂಗ್ಲೆಂಡ್‌ 2025

ಜೈಸ್ವಾಲ್‌ 712 5 ಇಂಗ್ಲೆಂಡ್‌ 2023/24

ವಿರಾಟ್‌ 692 4 ಆಸ್ಟ್ರೇಲಿಯಾ 2014/15

Read more Articles on