ಸ್ಕಾಟ್ಲೆಂಡ್ 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಸಾಧ್ಯತೆ-ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಹಿಂದಕ್ಕೆ

| Published : Sep 17 2024, 12:57 AM IST / Updated: Sep 17 2024, 04:09 AM IST

ಸಾರಾಂಶ

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು 2026 ರ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಹಿಂದೆ ಸರಿದ ನಂತರ, ಸ್ಕಾಟ್ಲೆಂಡ್ ಆತಿಥ್ಯ ವಹಿಸಲು ಮುಂದೆ ಬಂದಿದೆ. ಈ ಕ್ರೀಡಾಕೂಟವು ಗ್ಲಾಸ್ಗೋದಲ್ಲಿ ನಡೆಯುವ ನಿರೀಕ್ಷೆಯಿದೆ  

ಲಂಡನ್‌: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದ ಬಳಿಕ, ಇದೀಗ ಆತಿಥ್ಯ ವಹಿಸಲು ಸ್ಕಾಟ್ಲೆಂಡ್‌ ಮುಂದೆ ಬಂದಿದೆ.

ಆ ದೇಶದ ರಾಜಧಾನಿ ಗ್ಲಾಸ್‌ಗೋನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ತಿಳಿದುಬಂದಿದೆ. 2014ರಲ್ಲಿ ಗ್ಲಾಸ್‌ಗೋ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸಿತ್ತು. ಆಗ ಬಳಕೆಯಾಗಿದ್ದ ಕ್ರೀಡಾ ಸಂಕೀರ್ಣಗಳನ್ನೇ 2026ರಲ್ಲೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆತಿಥ್ಯದಿಂದ ಹಿಂದೆ ಸರಿದರೂ, ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌ (ಸಿಜಿಎಫ್‌)ಗೆ ವಿಕ್ಟೋರಿಯಾ ಸರ್ಕಾರ 256 ಅಮೆರಿಕನ್‌ ಡಾಲರ್‌ ಪರಿಹಾರ ನೀಡಿದೆ. 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕೇವಲ 10ರಿಂದ 13 ಕ್ರೀಡೆಗಳಷ್ಟೇ ಇರಲಿವೆ ಎಂದು ತಿಳಿದುಬಂದಿದೆ.