ಅಭ್ಯಾಸದ ವೇಳೆ ಅಭಿಮಾನಿಯ ಐಫೋನ್‌ ಗಾಜನ್ನೇ ಒಡೆದ ಸಿಎಸ್‌ಕೆ ಸ್ಟಾರ್‌!

| Published : May 08 2024, 01:06 AM IST

ಅಭ್ಯಾಸದ ವೇಳೆ ಅಭಿಮಾನಿಯ ಐಫೋನ್‌ ಗಾಜನ್ನೇ ಒಡೆದ ಸಿಎಸ್‌ಕೆ ಸ್ಟಾರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಅಭಿಮಾನಿಯ ಕ್ಷಮೆ ಕೇಳಿದ ಡ್ಯಾರಿಲ್‌ ಮಿಚೆಲ್‌, ತಮ್ಮ ಗ್ಲೌಸ್‌ಅನ್ನು ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಧರ್ಮಶಾಲಾ: ಪಂಜಾಬ್‌ ಕಿಂಗ್ಸ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ನ ಡ್ಯಾರಿಲ್‌ ಮಿಚೆಲ್‌ ಅಭ್ಯಾಸದ ವೇಳೆ ಅಭಿಮಾನಿಯ ಐಫೋನ್‌ ಗಾಜು ಒಡೆದು ಹಾಕಿದ್ದಾರೆ. ಡ್ಯಾರಿಲ್‌ ಮಿಚೆಲ್‌ ಅವರು ಹೊಡೆದ ಚೆಂಡು ನೇರವಾಗಿ ಸ್ಟೇಡಿಯಂನಲ್ಲಿದ್ದ ಅಭಿಮಾನಿಯ ಮೇಲೆ ಬಿದ್ದಿದೆ. ಇದರಿಂದ ಅವರ ಕೈಯಲ್ಲಿದ್ದ ಮೊಬೈಲ್‌ನ ಗಾಜು ಒಡೆದಿದೆ. ಬಳಿಕ ಅಭಿಮಾನಿಯ ಕ್ಷಮೆ ಕೇಳಿದ ಡ್ಯಾರಿಲ್‌ ಮಿಚೆಲ್‌, ತಮ್ಮ ಗ್ಲೌಸ್‌ಅನ್ನು ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.ಏಷ್ಯನ್ ಯೂತ್‌ ಬಾಕ್ಸಿಂಗ್‌: 43 ಪದಕ ಬಾಚಿದ ಭಾರತ

ಆಸ್ತಾನ(ಕಜಕಸ್ತಾನ): ಇಲ್ಲಿ ಮಂಗಳವಾರ ಕೊನೆಗೊಂಡ ಏಷ್ಯನ್‌ ಅಂಡರ್‌-22 ಹಾಗೂ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 43 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಶನಿವಾರ ಭಾರತಕ್ಕೆ 7 ಚಿನ್ನದ ಪದಕ ಲಭಿಸಿತು. ಒಟ್ಟಾರೆ ಭಾರತದ ಅಥ್ಲೀಟ್‌ಗಳು 12 ಚಿನ್ನ, 14 ಬೆಳ್ಳಿ ಹಾಗೂ 17 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಪದಕ ಗಳಿಕೆಯಲ್ಲಿ 2ನೇ ಸ್ಥಾನ ಗಳಿಸಿತು. ಆತಿಥೇಯ ಕಜಕಸ್ತಾನ 48 ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು.