ಸಾರಾಂಶ
ರಾಷ್ಟ್ರ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ವಂದನಾಗೆ ಚಿನ್ನದ ಪದಕಡಾಡ್ಜ್ ಬಾಲ್ ಫೆಡರೇಷನ್, ಮಹಾರಾಷ್ಟ್ರ ಡಾಡ್ಜ್ ಬಾಲ್ ಅಸೋಷಿಯೇಷನ್ ಆಶ್ರಯದಲ್ಲಿ ನಡೆದ ಪಂದ್ಯಾವಳಿ
ಭಾರತೀನಗರ:
ಮಹಾರಾಷ್ಟ್ರ ರಾಜ್ಯದ ಎಲ್ಲೋರದ ಸಂತ ಜನಾರ್ಧನ ಸ್ವಾಮಿ ಶಂಕರ ಗುರುಕುಲ ಇಂಡಿಯನ್ ಸಂಸ್ಥೆಯಿಂದ ನಡೆದ 2ನೇ ರಾಷ್ಟ್ರಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಜನನಿ ವಿದ್ಯಾಸಂಸ್ಥೆ ಎ.ಎನ್.ವಂದನಾ ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿದ್ದಾರೆ.ಡಾಡ್ಜ್ ಬಾಲ್ ಫೆಡರೇಷನ್, ಮಹಾರಾಷ್ಟ್ರ ಡಾಡ್ಜ್ ಬಾಲ್ ಅಸೋಷಿಯೇಷನ್ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳೆಯರ ಮಿಶ್ರ ಡಬಲ್ಸ್ ತಂಡದ ತರಬೇತುದಾರರಾಗಿ ಜನನಿ ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕ ಕೆ.ಎನ್.ಮಲ್ಲೇಶ್ ಕರ್ನಾಟಕ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಗಳಿಸಿದ್ದಾರೆ. ಈ ಇಬ್ಬರನ್ನು ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಜಗದೀಶ್, ಮುಖ್ಯಶಿಕ್ಷಕಿ ಸೌಮ್ಯ ಜಗದೀಶ್, ಸಿಬ್ಬಂದಿ ಅಭಿನಂದಿಸಿದೆ.
7ಕೆಎಂಎನ್ ಡಿ19ಟ್ರೋಫಿಯೊಂದಿಗೆ ಎ.ಎನ್.ವಂದನಾ ಮತ್ತು ತರಬೇತುದಾರ ಕೆ.ಎನ್.ಮಲ್ಲೇಶ್.