ಸಾರಾಂಶ
3 ಜಯ ಸಾಧಿಸಿರುವ ಗುಜರಾತ್ ಟೈಟಾನ್ಸ್ ಹಾಗೂ ಸತತ 2 ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನ ರಾಯಲ್ಸ್ ಬುಧವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಗೆಲುವಿನ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿವೆ.
ಅಹಮದಾಬಾದ್: ಸತತ 3 ಜಯ ಸಾಧಿಸಿರುವ ಗುಜರಾತ್ ಟೈಟಾನ್ಸ್ ಹಾಗೂ ಸತತ 2 ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನ ರಾಯಲ್ಸ್ ಬುಧವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಗೆಲುವಿನ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿವೆ. ಎರಡೂ ತಂಡಗಳಿಗೆ ಬೌಲಿಂಗ್ ವಿಭಾಗದ್ದೇ ಚಿಂತೆಯಾಗಿದ್ದು, ಸುಧಾರಣೆ ಕಾಣದಿದ್ದರೆ ಲೀಗ್ ಸಾಗಿದಂತೆ ಸಮಸ್ಯೆ ಹೆಚ್ಚಾಗಲಿದೆ.
ಗುಜರಾತ್ ತಂಡ ಮೊಹಮದ್ ಸಿರಾಜ್ ಹಾಗೂ ಸಾಯಿ ಕಿಶೋರ್ ಮೇಲೆ ಹೆಚ್ಚು ಅವಲಂಬಿತಗೊಂಡಿದ್ದು, ರಶೀದ್ ಖಾನ್ ಹಾಗೂ ಇಶಾಂತ್ ಶರ್ಮಾರ ಲಯ ತಲೆನೋವು ತಂದೊಡ್ಡಿದೆ. ಟಿ20 ತಾರೆ ರಶೀದ್ 4 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದು ಓವರ್‌ಗೆ 10ರಂತೆ ರನ್ ಬಿಟ್ಟುಕೊಡುತ್ತಿದ್ದಾರೆ. ಮತ್ತೊಂದೆಡೆ ಇಶಾಂತ್ 3 ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದು, 12ರ ಎಕಾನಮಿ ರೇಟ್ ಹೊಂದಿದ್ದಾರೆ. ಆಘಾತಕಾರಿ ವಿಷಯ ಏನಂದರೆ, ಗುಜರಾತ್‌ಗೆ ಮೀಸಲು ವೇಗಿಗಳೂ ಇಲ್ಲ. ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿರುವ ರಬಾಡ, ಇನ್ನೂ ವಾಪಸಾಗಿಲ್ಲ.
ಇನ್ನು, ರಾಜಸ್ಥಾನ ಸಹ ತನ್ನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಧಾವಂತದಲ್ಲಿದೆ. ಜೈಸ್ವಾಲ್ ಸ್ಥಿರ ಪ್ರದರ್ಶನ ತೋರಬೇಕಿದ್ದು, ವೇಗಿ ಸಂದೀಪ್ ಶರ್ಮಾಗೆ ಸರಿಯಾದ ಬೆಂಬಲ ಸಿಗಬೇಕಿದೆ. ಸ್ಯಾಮ್ಸನ್, ಪರಾಗ್, ಹೆಟ್ಮೇಯರ್, ಜುರೆಲ್, ರಾಣಾ ದೊಡ್ಡ ಸ್ಕೋರ್ ಗಳಿಸಬೇಕಾದ ಜವಾಬ್ದಾರಿ ಇದೆ. ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್