ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ನಿರ್ಣಾಯಕ ಪಂದ್ಯದಲ್ಲಿ ಸೋತ ಗುಕೇಶ್‌, ಅಂಕ ಮತ್ತೆ ಸಮಬಲ!

| Published : Dec 10 2024, 12:32 AM IST / Updated: Dec 10 2024, 04:14 AM IST

ಸಾರಾಂಶ

ಸತತ 7 ಡ್ರಾ ಬಳಿಕ ಗೆಲ್ಲುವ ಮೂಲಕ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಪಡೆದಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ನಿರ್ಣಾಯಕ ಪಂದ್ಯದಲ್ಲಿ ಸೋತಿದ್ದಾರೆ.

ಸಿಂಗಾಪುರ: ಸತತ 7 ಡ್ರಾ ಬಳಿಕ ಗೆಲ್ಲುವ ಮೂಲಕ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಪಡೆದಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ನಿರ್ಣಾಯಕ ಪಂದ್ಯದಲ್ಲಿ ಸೋತಿದ್ದಾರೆ.

 ಹಾಲಿ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಸೋಮವಾರ ನಡೆದ 12ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ಗೆ ಸೋಲು ಎದುರಾಯಿತು. ಇದರೊಂದಿಗೆ ಅಂಕಗಳು 6-6ರಲ್ಲಿ ಸಮಬಲಗೊಂಡಿವೆ.1ನೇ ಸುತ್ತಿನಲ್ಲಿ ಗೆದ್ದಿದ್ದ 32 ವರ್ಷದ ಲಿರೆನ್‌ಗೆ ಇದು ಕೂಟದಲ್ಲಿ 2ನೇ ಜಯ. 

ಪಂದ್ಯದಲ್ಲಿ ಅವರು 39ನೇ ಸುತ್ತಿನ ಬಳಿಕ ಗೆಲುವು ತಮ್ಮದಾಗಿಸಿಕೊಂಡರು. ಇಬ್ಬರ ನಡುವೆ ಇನ್ನು 2 ಸುತ್ತಿನ ಪಂದ್ಯ ಬಾಕಿಯಿವೆ. ಮಂಗಳವಾರ ವಿಶ್ರಾಂತಿ ದಿನವಾಗಿದ್ದು, ಬುಧವಾರ, ಗುರುವಾರ ಪಂದ್ಯಗಳು ನಡೆಯಲಿವೆ. ಕನಿಷ್ಠ 1.5 ಅಂಕ ಗಳಿಸುವ ಆಟಗಾರ ಚಾಂಪಿಯನ್‌ ಎನಿಸಿಕೊಳ್ಳಲಿದ್ದಾರೆ. 14 ಸುತ್ತುಗಳ ಬಳಿಕ ಅಂಕಗಳು ಸಮಬಲಗೊಂಡರೆ ಡಿ.14ರಂದು ಟೈ ಬ್ರೇಕರ್‌ ನಡೆಯಲಿದೆ.

ಸಿರಾಜ್‌ಗೆ ದಂಡ, ಹೆಡ್‌ಗೆ ಎಚ್ಚರಿಕೆ

ಅಡಿಲೇಡ್‌: 2ನೇ ಟೆಸ್ಟ್‌ ವೇಳೆ ಪರಸ್ಪರ ವಾಗ್ವಾದ ನಡೆಸಿದ್ದಕ್ಕೆ ಭಾರತದ ವೇಗಿ ಮೊಹಮದ್‌ ಸಿರಾಜ್‌ಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಿದೆ. ಆಸ್ಟ್ರೇಲಿಯಾ ಬ್ಯಾಟರ್‌ ಟ್ರ್ಯಾವಿಸ್‌ ಹೆಡ್‌ಗೆ ಎಚ್ಚರಿಕೆ ನೀಡಲಾಗಿದೆ.

 2ನೇ ಇನ್ನಿಂಗ್ಸ್‌ನಲ್ಲಿ ಹೆಡ್‌ರನ್ನು ಔಟ್‌ ಮಾಡಿದ್ದ ಸಿರಾಜ್‌ ಕೈ ಸನ್ನೆ ಮೂಲಕ ‘ಸೆಂಡ್‌ಆಫ್‌’ ನೀಡಿದ್ದರು. ಇದಕ್ಕೆ ಹೆಡ್‌ ಕೂಡಾ ಪ್ರತಿಕ್ರಿಯಿಸಿದ್ದರು. ಇದು ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು. ಸದ್ಯ ನಿಯಮ ಉಲ್ಲಂಘನೆ ಕಾರಣಕ್ಕೆ ಐಸಿಸಿ ಇಬ್ಬರಿಗೂ ಶಿಸ್ತು ದಾಖಲೆಯ ಕಡತದಲ್ಲಿ ತಲಾ 1 ಅಂಕ ಕಡಿತಗೊಳಿಸಿ, ಎಚ್ಚರಿಕೆ ನೀಡಿದೆ.