4 ವರ್ಷದ ಹಿಂದೆ ಮದುವೆಯಾಗಿದ್ದ ಜೋಡಿ. ದಂಪತಿಗೆ ಒಂದು ಮಗುವಿದೆ. ಆದರೆ ಸದ್ಯ ಇಬ್ಬರೂ ಬೇರೆ ಬೇರೆಯಾಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಮುಂಬೈ: ಭಾರತದ ತಾರಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮೂಲದ ನಟಿ ನತಾಶಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ತಾಣಗಳಲ್ಲಿ ಭಾರಿ ವದಂತಿ ಹರಿದಾಡುತ್ತಿದೆ. 

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿರುವ ಹಾರ್ದಿಕ್‌ 4 ವರ್ಷಗಳ ಹಿಂದೆ ತಮ್ಮ ಗೆಳತಿ ನತಾಶಾ ಅವರನ್ನು ಮದುದೆಯಾಗಿದ್ದರು. ದಂಪತಿಗೆ ಒಂದು ಮಗುವಿದೆ. 

ಆದರೆ ಸದ್ಯ ಇಬ್ಬರೂ ಬೇರೆ ಬೇರೆಯಾಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ನತಾಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಪಾಂಡ್ಯ ಹೆಸರನ್ನು ಕಿತ್ತು ಹಾಕಿದ್ದಾರೆ. ಅಲ್ಲದೆ ಐಪಿಎಲ್‌ ವೇಳೆ ಕೂಡಾ ಕ್ರೀಡಾಂಗಣಗಳಲ್ಲೂ ನತಾಶಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಬಿರುಕು ಬಿಟ್ಟಿದೆ ಎಂಬ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಹಾರ್ದಿಕ್‌ ಅಥವಾ ನತಾಶಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಆರ್ಚರಿ ವಿಶ್ವಕಪ್: ಭಾರತ ಮಹಿಳಾ ತಂಡಕ್ಕೆ ಬಂಗಾರ

ಯೆಕೋನ್‌(ದಕ್ಷಿಣ ಕೊರಿಯಾ): ಆರ್ಚರಿ ವಿಶ್ವಕಪ್‌ 2ನೇ ಹಂತದಲ್ಲಿ ಭಾರತದ ಮಹಿಳಾ ಕಾಂಪೌಂಡ್‌ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.ಶನಿವಾರ ಜ್ಯೋತಿ ಸುರೇಖಾ ವೆನ್ನಂ, ಪರ್‌ನೀತ್‌ ಕೌರ್‌ ಹಾಗೂ ಅದಿತಿ ಸ್ವಾಮಿ ಅವರನ್ನೊಳಗೊಂಡ ವಿಶ್ವ ನಂ.1 ತಂಡ ಟರ್ಕಿ ವಿರುದ್ಧ 232-226 ಅಂಕಗಳಿಂದ ಜಯಭೇರಿ ಬಾರಿಸಿತು. ಇದು ಜ್ಯೋತಿ, ಕೌರ್‌, ಅದಿತಿಗೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಚಿನ್ನ. ಇದೇ ವೇಳೆ ಕಾಂಪೌಂಡ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಜ್ಯೋತಿ-ಪ್ರಿಯಾನ್ಸ್‌ ಅಮೆರಿಕ ಜೋಡಿ ವಿರುದ್ಧ 153-155 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ. ಇನ್ನು, ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಪ್ರಥಮೇಶ್‌ ಕಂಚಿನ ಪದಕ ಪಂದ್ಯದಲ್ಲಿ ಸೋತು ಪದಕ ತಪ್ಪಿಸಿಕೊಂಡರು.