ಸಾರಾಂಶ
ಹಾರ್ದಿಕ್ ಹಾಗೂ ನತಾಶಾ 2020ರಲ್ಲಿ ವಿವಾಹವಾಗಿದ್ದರು. ಕಳೆದ ಐಪಿಎಲ್ ವೇಳೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ಪಾಂಡ್ಯ’ ಹೆಸರನ್ನು ನತಾಶಾ ಕಿತ್ತು ಹಾಕಿದ ಬಳಿಕ ವಿಚ್ಚೇದನ ವದಂತಿ ಹಬ್ಬಿತ್ತು.
ನವದೆಹಲಿ: ಭಾರೀ ಊಹಾಪೋಹಗಳಿಗೆ ಕಾರಣವಾಗಿದ್ದ ತಾರಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮಾಡೆಲ್ ನತಾಶಾ ಸ್ಟಾನ್‌ಕೋವಿಚ್ ನಡುವಿನ ವಿವಾಹ ವಿಚ್ಚೇದನ ಸುದ್ದಿ ಈಗ ಅಧಿಕೃತಗೊಂಡಿದೆ.
ಇದನ್ನು ಸ್ವತಃ ಹಾರ್ದಿಕ್ ಪಾಂಡ್ಯ ಅವರು ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ‘4 ವರ್ಷಗಳ ಬಳಿಕ ನಾನು ಹಾಗೂ ನತಾಶಾ ವಿಚ್ಚೇದನ ಪಡೆದಿದ್ದೇವೆ. ನಾವು ಒಟ್ಟಿಗೇ ಇರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇದು ನನ್ನ ಬದುಕಿನ ಕಠಿಣ ನಿರ್ಧಾರ.
ನಮ್ಮ ಮಗ ಅಗಸ್ತ್ಯ ಸಂತೋಷವಾಗಿರಲು ನಾವಿಬ್ಬರೂ ಸಾಧ್ಯವಿರುವಷ್ಟು ಪ್ರಯತ್ನಿಸುತ್ತೇವೆ. ಇಂತಹ ಕಠಿಣ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಹಾರ್ದಿಕ್ ಹಾಗೂ ನತಾಶಾ 2020ರಲ್ಲಿ ವಿವಾಹವಾಗಿದ್ದರು. ಕಳೆದ ಐಪಿಎಲ್ ವೇಳೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ಪಾಂಡ್ಯ’ ಹೆಸರನ್ನು ನತಾಶಾ ಕಿತ್ತು ಹಾಕಿದ ಬಳಿಕ ವಿಚ್ಚೇದನ ವದಂತಿ ಹಬ್ಬಿತ್ತು.
ಫಿಫಾ: 124ನೇ ಸ್ಥಾನದಲ್ಲೇ ಉಳಿದ ಭಾರತ!
ನವದೆಹಲಿ: ಫಿಫಾ ಫುಟ್ಬಾಲ್ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲಲಿ ಭಾರತ ತಂಡ 124ನೇ ಸ್ಥಾನದಲ್ಲೇ ಮುಂದುವರಿದಿದೆ. ಗುರುವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಹಾಲಿ ವಿಶ್ವ ಹಾಗೂ ಕೋಪಾ ಅಮೆರಿಕ ಚಾಂಪಿಯನ್ ಅರ್ಜೆಂಟೀನಾ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇತ್ತೀಚೆಗೆ ಯುರೋ ಕಪ್ ಗೆದ್ದ ಸ್ಪೇನ್ 5 ಸ್ಥಾನ ಮೇಲೇರಿ 3ನೇ ಸ್ಥಾನ ತಲುಪಿದೆ. ಫ್ರಾನ್ಸ್ 2ನೇ ಸ್ಥಾನದಲ್ಲೇ ಉಳಿದಿದೆ. ಇಂಗ್ಲೆಂಡ್ ಹಾಗೂ ಬ್ರೆಜಿಲ್ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿವೆ. ಕಳೆದ ವರ್ಷ ಅಗ್ರ 100ರಿಂದ ಹೊರಬಿದ್ದಿದ್ದ ಭಾರತ, ಆ ಬಳಿಕ ಚೇತರಿಕೆ ಕಂಡಿಲ್ಲ. ಏಷ್ಯಾ ರ್‍ಯಾಂಕಿಂಗ್‌ನಲ್ಲಿ ಭಾರತ 22ನೇ ಸ್ಥಾನದಲ್ಲಿದ್ದು, ಲೆಬನಾನ್, ಪ್ಯಾಲೆಸ್ತೀನ್ ಹಾಗೂ ವಿಯೆಟ್ನಾಂಗಿಂತ ಹಿಂದಿದೆ.