ಸಾರಾಂಶ
ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆ: ನಾಯಕತ್ವ ಕಳೆದುಕೊಳ್ಳಲಿರುವ ಹರ್ಮನ್‌ಪ್ರೀತ್ ಕೌರ್? ಆಯ್ಕೆ ಸಮಿತಿ, ಪ್ರಧಾನ ಕೋಚ್ ಅಮೋಲ್ ಮಜುಂದಾರ್ ಜೊತೆ ಚರ್ಚಿಸಲಿರುವ ಬಿಸಿಸಿಐ.
ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದ ಭಾರತ ಮಹಿಳಾ ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದ್ದು, ಸದ್ಯದಲ್ಲೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ, ಆಯ್ಕೆ ಸಮಿತಿ ಸದಸ್ಯರು ಹಾಗೂ ಪ್ರಧಾನ ಕೋಚ್ ಅಮೋಲ್ ಮಜುಂದಾರ್ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಭಾರತ ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿದ್ದು, ಟ್ರೋಫಿ ಬರ ಈ ಸಲವೂ ನೀಗಲಿಲ್ಲ. ಇತ್ತೀಚೆಗೆ ಏಷ್ಯಾಕಪ್‌ನಲ್ಲೂ ಭಾರತ ಎಡವಿತ್ತು. ಹೀಗಾಗಿ, ಹರ್ಮನ್‌ಪ್ರೀತ್‌ರ ನಾಯಕತ್ವದ ಬಗ್ಗೆ ಕೆಲ ಪ್ರಶ್ನೆಗಳು ಮೂಡಿದ್ದು, ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ರಾಷ್ಟ್ರೀಯ ತಂಡದ ಉಪನಾಯಕಿ, ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಸ್ಮೃತಿ ಮಂಧನಾಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚು.