ಸಾರಾಂಶ
ಮುಂಬೈ: ಜುಲೈ 19ರಿಂದ ಶ್ರೀಲಂಕಾದಲ್ಲಿ ಆರಂಭಗೊಳ್ಳಲಿರುವ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಶ್ರೇಯಾಂಕ ಪಾಟೀಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಶನಿವಾರ ಬಿಸಿಸಿಐ ಟೂರ್ನಿಗೆ 15 ಮಂದಿಯ ತಂಡ ಪ್ರಕಟಿಸಿತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವ ವಹಿಸಲಿದ್ದು, ಸ್ಮೃತಿ ಮಂಧನಾ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅನುಭವಿಗಳಾದ ಶಫಾಲಿ ವರ್ಮಾ, ರಿಚಾ ಘೋಷ್, ಜೆಮಿಮಾ ರೋಡ್ರಿಗ್ಸ್, ದೀಪ್ತಿ ಶರ್ಮಾ ಜೊತೆ ಸಜನಾ ಸಜೀವನ್, ಆಶಾ ಶೋಭನಾ ಕೂಡಾ ತಂಡದಲ್ಲಿದ್ದಾರೆ.ಭಾರತ ಟೂರ್ನಿಯಲ್ಲಿ ‘ಎ’ ಗುಂಪಿನಲ್ಲಿದ್ದು, ಜು.19ರಂದು ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಬಳಿಕ ಜು.21ಕ್ಕೆ ಯುಎಇ, ಜು.23ಕ್ಕೆ ನೇಪಾಳ ವಿರುದ್ಧ ಸೆಣಸಲಿದೆ. ತಂಡ: ಹರ್ಮನ್‌ಪ್ರೀತ್(ನಾಯಕಿ), ಸ್ಮೃತಿ, ಶಫಾಲಿ, ದೀಪ್ತಿ ಶರ್ಮಾ, ಜೆಮಿಮಾ, ರಿಚಾ ಘೋಷ್, ಉಮಾ ಚೆಟ್ರಿ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕ, ಸಜನಾಮೀಸಲು ಆಟಗಾರ್ತಿಯರು: ಶ್ವೇತಾ ಶೆಹ್ರಾವತ್, ಸಾಯಿಕಾ ಇಶಾಖ್, ತನುಜಾ ಕನ್ವಾರ್, ಮೇಘನಾ ಸಿಂಗ್.