ಐಸಿಸಿ ರ್‍ಯಾಂಕಿಂಗ್‌: 12ನೇ ಸ್ಥಾನ ಪಡೆದ ಹರ್ಮನ್‌ಪ್ರೀತ್‌

| Published : Jul 17 2024, 12:49 AM IST

ಐಸಿಸಿ ರ್‍ಯಾಂಕಿಂಗ್‌: 12ನೇ ಸ್ಥಾನ ಪಡೆದ ಹರ್ಮನ್‌ಪ್ರೀತ್‌
Share this Article
  • FB
  • TW
  • Linkdin
  • Email

ಸಾರಾಂಶ

ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಆಟವಾಡಿದ್ದ ಹರ್ಮನ್‌ಪ್ರೀತ್‌. ಏಷ್ಯಾಕಪ್‌ ಟಿ20 ಟೂರ್ನಿಯಲ್ಲೂ ಲಯ ಮುಂದುವರಿಸುವ ನಿರೀಕ್ಷೆ.

ದುಬೈ: ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಇನ್ನು ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ 2 ಸ್ಥಾನ ಮೇಲೇರಿ 15ನೇ ಸ್ಥಾನ ತಲುಪಿದ್ದು, ಸ್ಮೃತಿ ಮಂಧನಾ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ 3ನೇ ಸ್ಥಾನದಲ್ಲಿ ಮುಂದುವರಿದಿದ್ದು, ಶ್ರೇಯಾಂಕ ಪಾಟೀಲ್‌ 9 ಸ್ಥಾನ ಏರಿಕೆ ಸಾಧಿಸಿ 60ನೇ ಸ್ಥಾನ ಪಡೆದಿದ್ದಾರೆ.ಜು.19ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್‌ ಟಿ20 ಟೂರ್ನಿಯನ್ನು ಆಡಲು ಭಾರತ ತಂಡ ಕೊಲಂಬೊ ತಲುಪಿದ್ದು, ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್‌ ಆಗಲು ಎದುರು ನೋಡುತ್ತಿದೆ. ಹರ್ಮನ್‌ಪ್ರೀತ್‌ ಕೌರ್‌ ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.