9ನೇ ಹವ್ಯಕ ಬ್ಯಾಡ್ಮಿಂಟನ್‌ : ಅಖಿಲ್‌ ಹೆಗಡೆ, ವರ್ಷಾ ಭಟ್‌ ಚಾಂಪಿಯನ್‌

| N/A | Published : Jul 23 2025, 03:34 AM IST / Updated: Jul 23 2025, 09:29 AM IST

Badminton
9ನೇ ಹವ್ಯಕ ಬ್ಯಾಡ್ಮಿಂಟನ್‌ : ಅಖಿಲ್‌ ಹೆಗಡೆ, ವರ್ಷಾ ಭಟ್‌ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಯಾ ಟೂರ್ನಮೆಂಟ್‌ನ ಒಟ್ಟು 19 ವಿಭಾಗಗಳಲ್ಲಿ ನಡೆದ ಬ್ಯಾಡ್ಮಿಂಟನ್‌ ಸ್ಪರ್ಧೆ. ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಅರವಿಂದ ಭಟ್ ಉಪಸ್ಥಿತಿ

  ಬೆಂಗಳೂರು :  ಹಬ್ಯಾ ಟೂರ್ನಮೆಂಟ್‌ನಲ್ಲಿ ಹವ್ಯಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್ ವತಿಯಿಂದ 9ನೇ ಹವ್ಯಕ ಬ್ಯಾಡ್ಮಿಂಟನ್ ಸ್ಪರ್ಧೆ ಇತ್ತೀಚೆಗೆ ನಗರದ ಅಂಜನಾಪುರದ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಿತು. 

ಪುರುಷರ ಮುಕ್ತ ವಿಭಾಗದ ಸಿಂಗಲ್ಸ್‌ನಲ್ಲಿ ಅಖಿಲ್‌ ಹೆಗಡೆ, ಮಹಿಳೆಯರ ಮುಕ್ತ ವಿಭಾಗದಲ್ಲಿ ವರ್ಷಾ ಭಟ್‌ ಚಾಂಪಿಯನ್‌ ಆದರು. ಜು.19ರಂದು ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸ್ಪೈಸ್ ಬೀಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಹೆಗಡೆ, ಸೈನ್ ಡೆಸ್ಕ್ ಸಿಇಓ ಕೃಪೇಶ್ ಭಟ್, ಆಸ್ಟರ್ ಆರ್.ವಿ. ಆಸ್ಪತ್ರೆಯ ಸರ್ಜನ್ ಡಾ. ಜೆ.ವಿ. ಶ್ರೀನಿವಾಸ್ ಹಾಗೂ ಹೃದ್ರೋಗ ತಜ್ಞ ಡಾ. ದಿವಾಕರ್ ಭಟ್ ಭಾಗವಹಿಸಿದ್ದರು.

 ನಂತರ ವಿವಿಧ ವಯೋಮಾನದವರಿಗೆ ಸ್ಪರ್ಧೆಗಳು ನಡೆಯಿತು. ಜು.20ರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಅರವಿಂದ ಭಟ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪ್ರಕಾಶ್ ಹೆಗಡೆ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಹಬ್ಯಾ ಸ್ಥಾಪಕರಾದ ಸಿ.ಎ.ಜಗದೀಶ್ ಹೊಸಬಾಳೆ ಹಾಗೂ ಸಿಎಮ್ಎ ಕಮಲಾಕರ ಕೆ.ಎಸ್. ಉಪಸ್ಥಿತರಿದ್ದರು.ವಿಜೇತರ ಪಟ್ಟಿ

ವಿಭಾಗಚಾಂಪಿಯನ್‌ರನ್ನರ್‌-ಅಪ್‌

ಅಂಡರ್‌-16 ಬಾಲಕರ ಸಿಂಗಲ್ಸ್‌ದಿಗಂತ್‌ ಹೆಗಡೆಆವಿಕ್‌

ಅಂಡರ್‌-19 ಬಾಲಕಿಯರ ಸಿಂಗಲ್ಸ್‌ತ್ವಿಷಾ ಹೆಗಡೆಚಾರ್ವಿ ಗಣೇಶ್‌

ಅಂಡರ್‌-16 ಮಿಶ್ರ ಡಬಲ್ಸ್‌ತ್ವಿಷಾ-ದಿಗಂತ್‌ಸಚಿನ್‌ ಹೆಗಡೆ-ಮಾನ್ವಿ

ಪುರುಷರ ಸಿಂಗಲ್ಸ್‌(ಶ್ರೇಯಾಂಕಿತ)ಅಖಿಲ್‌ ಹೆಗಡೆಸಾತ್ವಿಕ್ ಭಟ್‌

ಪುರುಷ ಸಿಂಗಲ್ಸ್‌(ಶ್ರೇಯಾಂಕರಹಿತ)ಪ್ರಜ್ವಲ್‌ ಭಟ್‌ದಿಗಂತ್‌ ಹೆಗಡೆ

ಮುಕ್ತ ಪುರುಷರ ಡಬಲ್ಸ್‌ಮುರಳಿ ಹೆಗಡೆ-ಅಖಿಲ್‌ಪ್ರಜ್ವಲ್‌-ಸುಮಿತ್‌ ಹೆಗಡೆ

ಮುಕ್ತ ಮಹಿಳಾ ಸಿಂಗಲ್ಸ್‌ವರ್ಷಾ ಭಟ್‌ರಕ್ಷಾ ದಿನೇಶ್‌ ಹೆಗಡೆ

ಮುಕ್ತ ಮಹಿಳೆಯರ ಡಬಲ್ಸ್‌ರಕ್ಷಾ ಹೆಗಡೆ-ತ್ವಿಷಾಸುನೀತ-ವರ್ಷಾ ಭಟ್‌

ಪುರುಷರ ಸಿಂಗಲ್ಸ್‌(35+)ಅಶ್ವಿನಿ ಭಟ್‌ಸಂದೇಶ್‌ ಕುಮಾರ್‌

ಪುರುಷರ ಡಬಲ್ಸ್‌(35+)ಮಂಜುನಾಥ್‌-ನಿರಂಜನ್‌ ಹೆಗಡೆಶ್ರೇಯಸ್‌ ರಾವ್‌-ಅಶ್ವಿನಿ ಭಟ್

ಮಹಿಳಾ ಸಿಂಗಲ್ಸ್‌(35+)ಅಕ್ಷತಾ ಎಂ.ಕೆಶಾಂತಾ ಹೆಗಡೆ

ಮಹಿಳೆಯರ ಡಬಲ್ಸ್‌(35+)ದೀಪಿಕಾ ಹೆಗಡೆ-ಅಕ್ಷತಾ ಎಂ.ಕೆಸ್ಮಿತಾ ನಟರಾಜ್‌-ಸುನೀತ

ಪುರುಷರ ಸಿಂಗಲ್ಸ್‌(50+)ಮೋಹನ್ ಶ್ರೀನಿವಾಸ್‌ಶ್ರೀರಂಗ್‌ ಹೆಗಡೆ

ಪುರುಷರ ಡಬಲ್ಸ್‌(50+)ಜಗದೀಶ್‌ ಭಟ್‌-ವಿನೀತ್ ಭಟ್‌ರಮೇಶ್‌ ಹೆಗಡೆ-ನಾಗಾರಾಜ್‌ ಭಟ್‌

ಮಹಿಳಾ ಸಿಂಗಲ್ಸ್‌(50+)ಅನ್ನಪೂರ್ಣ ಭಟ್‌ಶೋಭಾ ಹೆಗಡೆ

ಪುರುಷರ ಸಿಂಗಲ್ಸ್‌(60+)ಗಂಗಾಧರ್‌ ಹೆಗಡೆರಾಘವೇಂದ್ರ ಎಂ.ಎಸ್‌.

ಪುರುಷರ ಡಬಲ್ಸ್‌(60+)ಉದಯ್‌ಕುಮಾರ್‌ ಶಾಸ್ತ್ರಿ-ವಿಶ್ವನಾಥ್‌ ಹೆಗಡೆರಾಘವೇಂದ್ರ-ಹಿರಿಯನ್ನ ಭಟ್‌

ಮಿಶ್ರ ವಯೋಮಿತಿ ಪುರುಷರ ಡಬಲ್ಸ್‌ಮಂಜುನಾಥ್‌ ರಾವ್‌-ಪ್ರಸನ್ನ ಹೆಬ್ಬಾರ್‌ಅಶ್ವಿನಿ ಭಟ್‌-ಸಾತ್ವಿಕ್‌ ಭಟ್‌

ಮಿಶ್ರ ವಯೋಮಿತಿ ಮಿಶ್ರ ಡಬಲ್ಸ್‌ಗುರುರಾಜ್ ಹೆಗಡೆ-ದೀಪಿಕಾ ಹೆಗಡೆವಿನೀತ್‌ ಭಟ್‌-ವರ್ಷಾ ಭಟ್‌

Read more Articles on