ಧೋನಿಯ ಐಪಿಎಲ್‌ ನಿವೃತ್ತಿ ಬಗ್ಗೆ ಅಪ್ಡೇಟ್‌ ಕೊಟ್ಟ ಸಿಎಸ್‌ಕೆ ತಂಡದ ಸಿಇಒ

| Published : May 22 2024, 12:48 AM IST

ಧೋನಿಯ ಐಪಿಎಲ್‌ ನಿವೃತ್ತಿ ಬಗ್ಗೆ ಅಪ್ಡೇಟ್‌ ಕೊಟ್ಟ ಸಿಎಸ್‌ಕೆ ತಂಡದ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಧೋನಿ ನಿವೃತ್ತಿ ಬಗ್ಗೆ ಕಳೆದ ಕೆಲವು ವರ್ಷಗಳಿಂದಲೂ ಊಹಾಪೋಹ ಹರಿದಾಡುತ್ತಿದ್ದು, 2024ರ ಆವೃತ್ತಿ ಬಳಿಕ ಐಪಿಎಲ್‌ಗೆ ವಿದಾಯ ಹೇಳಬಹುದು ಎನ್ನಲಾಗುತ್ತಿತ್ತು.

ಚೆನ್ನೈ: ಐಪಿಎಲ್‌ನಿಂದ ನಿವೃತ್ತಿಯಾಗುವ ಬಗ್ಗೆ ಎಂ.ಎಸ್.ಧೋನಿ ಈ ವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಎ ಕಾಶಿ ವಿಶ್ವನಾಥನ್‌ ಸ್ಪಷ್ಟನೆ ಹೇಳಿದ್ದಾರೆ.ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ವಿಶ್ವನಾಥನ್‌, ‘ಧೋನಿ ನಿವೃತ್ತಿ ಬಗ್ಗೆ ಡ್ರೆಸ್ಸಿಂಗ್‌ ರೂಂನಲ್ಲಿ ಚರ್ಚೆಯಾಗಿಲ್ಲ. ಅವರ ಭವಿಷ್ಯದ ಬಗ್ಗೆ ನಾವು ಅವರಲ್ಲಿ ಏನೂ ಕೇಳಿಲ್ಲ. ಸಮಯ ಬಂದಾಗ ಧೋನಿಯೇ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಅವರು ನಿರ್ಧಾರ ಕೈಗೊಳ್ಳುವ ವರೆಗೆ ನಾವು ಮಧ್ಯ ಪ್ರವೇಶಿಸುವುದಿಲ್ಲ’ ಎಂದು ಹೇಳಿದ್ದಾರೆ.ಧೋನಿ ನಿವೃತ್ತಿ ಬಗ್ಗೆ ಕಳೆದ ಕೆಲವು ವರ್ಷಗಳಿಂದಲೂ ಊಹಾಪೋಹ ಹರಿದಾಡುತ್ತಿದ್ದು, 2024ರ ಆವೃತ್ತಿ ಬಳಿಕ ಐಪಿಎಲ್‌ಗೆ ವಿದಾಯ ಹೇಳಬಹುದು ಎನ್ನಲಾಗುತ್ತಿತ್ತು. ಆದರೆ ಈ ಬಗ್ಗೆ ಧೋನಿ ಈ ವರೆಗೂ ಗುಟ್ಟುಬಿಟ್ಟುಕೊಟ್ಟಿಲ್ಲ.ಭಾರತ ಪುರುಷ, ಮಹಿಳಾ ರಿಲೇ ತಂಡಕ್ಕೆ ಬೆಳ್ಳಿ ಪದಕ

ಬ್ಯಾಂಕಾಕ್‌: ಇತ್ತೀಚೆಗಷ್ಟೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಭಾರತ ಪುರುಷ ಹಾಗೂ ಮಹಿಳಾ 4*400 ಮೀ. ರಿಲೇ ತಂಡಗಳು ಏಷ್ಯನ್‌ ರಿಲೇ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿವೆ. ವಿದ್ಯಾ, ಪೂವಮ್ಮ, ಪ್ರಾಚಿ ಚೌಧರಿ, ರೂಪಲ್‌ ಚೌಧರಿ ಅವರನ್ನೊಳಗೊಂಡ ಮಹಿಳಾ ತಂಡ 3 ನಿಮಿಷ 33.55 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾಯಿತು. ಮುಹಮ್ಮದ್‌ ಅನಸ್‌, ಸಂತೋಶ್‌ ಕುಮಾರ್‌, ಮಿಜೊ ಚಾಕೊ ಕುರಿಯನ್‌ ಹಾಗೂ ಅರೋಕಿಯಾ ರಾಜೀವ್‌ ಇದ್ದ ಪುರುಷರ ತಂಡ 3 ನಿಮಿಷ 05.76 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪಡೆಯಿತು.