ಸಾರಾಂಶ
ಚೊಚ್ಚಲ ಆವೃತ್ತಿ ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡ ನಮೀಬಿಯಾ ವಿರುದ್ಧ ಗೆದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಸ್ಕಟ್(ಒಮಾನ್): ಚೊಚ್ಚಲ ಆವೃತ್ತಿ ಮಹಿಳಾ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ‘ಬಿ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ಗುರುವಾರ ನಮೀಬಿಯಾ ವಿರುದ್ಧ 7-2 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ತಂಡಕ್ಕಿದು ಗುಂಪು ಹಂತದಲ್ಲಿ ಹ್ಯಾಟ್ರಿಕ್ ಜಯ. ಮೊದಲೆರಡು ಪಂದ್ಯಗಳಲ್ಲಿ ಪೋಲೆಂಡ್, ಅಮೆರಿಕ ವಿರುದ್ಧ ಗೆದ್ದಿತ್ತು. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ನ್ಯೂಜಿಲೆಂಡ್ ‘ಡಿ’ ಗುಂಪಿನಲ್ಲಿ 3ರಲ್ಲಿ 2 ಪಂದ್ಯ ಗೆದ್ದಿದೆ.
ಹಾಕಿ ಫೈವ್ಸ್ ವಿಶ್ವಕಪ್: ಭಾರತಕ್ಕೆಸ್ವಿಜ್ಜರ್ಲೆಂಡ್ ಮೊದಲ ಎದುರಾಳಿ
ಬೆಂಗಳೂರು: ಚೊಚ್ಚಲ ಎಫ್‌ಎಚ್‌ಐ ಹಾಕಿ ಫೈವ್ಸ್ ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನಲ್ಲಿರುವ ಭಾರತ ಪುರುಷರ ತಂಡ ತನ್ನ ಮೊದಲ ಪಂದ್ಯದಲ್ಲಿ ಸ್ವಿಜ್ಜರ್‌ಲೆಂಡ್ ವಿರುದ್ಧ ಭಾನುವಾರ ಸೆಣಸಲಿದೆ. ಸಿಮ್ರನ್‌ಜೀತ್ ಸಿಂಗ್ ತಂಡ ಮುನ್ನಡೆಸಲಿದ್ದು, ಅದೇ ದಿನ ಸಂಜೆ ಈಜಿಪ್ಟ್ ತಂಡವನ್ನು ಎದುರಿಸಲಿದೆ. ಗುಂಪು ಹಂತದ ಕೊನೆ ಪಂದ್ಯದಲ್ಲಿ ಸೋಮವಾರ ಜಮೈಕಾ ಎದುರಾಗಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಲಾ 2 ತಂಡಗಳು ಮಂಗಳವಾರ ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೆಣಸಲಿದ್ದು, ಅದೇ ದಿನ ಸೆಮಿಫೈನಲ್ ಪಂದ್ಯ ಕೂಡಾ ಜರುಗಲಿವೆ. ಬುಧವಾರ ಪ್ರಶಸ್ತಿಗಾಗಿ ಅಂತಿಮ ಹಣಾಹಣಿ ನಡೆಯಲಿದೆ.