ಸಾರಾಂಶ
ಬೆಂಗಳೂರು: ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್‌ನಲ್ಲಿ ಇನ್ನೂ ಎರಡು ವರ್ಷ ಆಡುವ ವಿಶ್ವಾಸವಿದೆ ಎಂದು ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹೇಳಿದ್ದಾರೆ.
42 ವರ್ಷದ ಧೋನಿ ಈ ಆವೃತ್ತಿಯ ಬಳಿಕ ನಿವೃತ್ತಿ ಘೋಷಿಸಬಹುದು ಎನ್ನುವ ನಿರೀಕ್ಷೆ ಇದೆಯಾದರೂ, ಹಸ್ಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಧೋನಿ ಇನ್ನೂ 2 ವರ್ಷ ಆಡಬಹುದು ಎನ್ನುವ ವಿಶ್ವಾಸವಿದೆ. ಅವರು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಪ್ರತಿ ಪಂದ್ಯಕ್ಕೂ ಉತ್ತಮ ಸಿದ್ಧತೆ ನಡೆಸುತ್ತಾರೆ. ಅವರ ದೇಹ ಸ್ಪಂದಿಸಿದರೆ ಇನ್ನೆರಡು ವರ್ಷ ಆಡಬಹುದು. ಐಪಿಎಲ್‌ನಲ್ಲಿ ಮುಂದುವರಿಯಬೇಕೋ ಬೇಡವೋ ಎನ್ನುವ ನಿರ್ಧಾರ ಅವರದ್ದೇ ಆಗಿರಲಿದೆ’ ಎಮದು ಹಸ್ಸಿ ಹೇಳಿದ್ದಾರೆ.
ಜಯದ ಗುಡ್‌ಬೈಗೆ ಕಾತರಿಸುತ್ತಿರುವ ಮುಂಬೈ-ಲಖನೌ
ಮುಂಬೈ: 17ನೇ ಆವೃತ್ತಿ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ. ಇತ್ತಂಡಗಳಿಗೂ ಇದು ಕೊನೆ ಪಂದ್ಯವಾಗಿದ್ದು, ಗೆಲುವಿನೊಂದಿಗೆ ಗುಡ್‌ಬೈ ಹೇಳಲು ಕಾತರಿಸುತ್ತಿದೆ.
5 ಬಾರಿ ಚಾಂಪಿಯನ್ ಮುಂಬೈ 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 8 ಅಂಕ ಸಂಪಾದಿಸಿದೆ. ತಂಡ ಈ ಪಂದ್ಯದಲ್ಲಿ ಗೆದ್ದರೆ ಕೊನೆ ಸ್ಥಾನದಿಂದ ಮೇಲೇರುವ ಸಾಧ್ಯತೆಗಳಿಗೆ. ಸೋತರೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಿಯಾಗಿಯೇ ಅಭಿಯಾನ ಕೊನೆಗೊಳಿಸಲಿದೆ.ಅತ್ತ ಲಖನೌ 13ರಲ್ಲಿ 6 ಪಂದ್ಯ ಗೆದ್ದಿದ್ದು, 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ತಂಡ ಪ್ಲೇ-ಆಫ್‌ನಿಂದ ಅಧಿಕೃತವಾಗಿ ಹೊರಬೀಳಲಿದ್ದರೂ, ಕಳಪೆ ನೆಟ್ ರನ್‌ರೇಟ್(-0.787) ಹೊಂದಿರುವ ಕಾರಣ ನಾಕೌಟ್‌ಗೇರುವ ಸಾಧ್ಯತೆಯಿಲ್ಲ. ತಂಡ ಸತತ 3 ಪಂದ್ಯಗಳಲ್ಲಿ ಸೋತಿದ್ದು, ಈ ಪಂದ್ಯದಲ್ಲಾದರೂ ಗೆಲ್ಲುವ ನಿರೀಕ್ಷೆಯಲ್ಲಿದೆ.
ಪಂದ್ಯ: ಸಂಜೆ 7.30ಕ್ಕೆ