ವಿಶ್ವಕ್ಕೇ ನಂಬರ್‌ 1 ಆಗುತ್ತೇನೆ ಅಂದುಕೊಂಡಿರಲಿಲ್ಲ: ಚಿರಾಗ್‌ ಶೆಟ್ಟಿ

| Published : Feb 04 2024, 01:37 AM IST

ವಿಶ್ವಕ್ಕೇ ನಂಬರ್‌ 1 ಆಗುತ್ತೇನೆ ಅಂದುಕೊಂಡಿರಲಿಲ್ಲ: ಚಿರಾಗ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿರಾಗ್‌ ಶೆಟ್ಟಿ ಶನಿವಾರ ನಿಪ್ಪೊನ್ ಪೇಂಟ್‌ ಬ್ಯಾಡ್ಮಿಂಟನ್‌ ಕಪ್‌ ಅಂಗವಾಗಿ ಆಯೋಜಿಸಲಾಗಿದ್ದ ‘ಮೀಟ್ ಆ್ಯಂಡ್‌ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯುವ ಬ್ಯಾಡ್ಮಿಂಟನ್ ಉತ್ಸಾಹಿಗಳೊಂದಿಗೆ ಕೆಲ ಸಮಯ ಕಳೆದು, ಸಲಹೆಗಳನ್ನು ಹಂಚಿಕೊಂಡರು ಮತ್ತು ಫೈನಲ್‌ ಪಂದ್ಯವನ್ನು ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಯಾಡ್ಮಿಂಟನ್‌ ಮೇಲೆ ಬಾಲ್ಯದಲ್ಲೇ ವಿಶೇಷ ಒಲವು ಇತ್ತು. ಅದಕ್ಕಾಗಿಯೇ ಎಲ್ಲರಂತೆ ನಾನೂ ಬ್ಯಾಡ್ಮಿಂಟನ್ ಆಡುತ್ತಿದ್ದೆ. ಆದರೆ ಅದರಲ್ಲೇ ಚಾಂಪಿಯನ್‌, ವಿಶ್ವ ನಂ.1 ಆಗುತ್ತೇನೆ ಎಂದುಕೊಂಡಿರಲಿಲ್ಲ ಎಂದು ಭಾರತದ ತಾರಾ ಶಟ್ಲರ್‌ ಚಿರಾಗ್‌ ಶೆಟ್ಟಿ ಹೇಳಿದ್ದಾರೆ.ಶನಿವಾರ ನಿಪ್ಪೊನ್ ಪೇಂಟ್‌ ಬ್ಯಾಡ್ಮಿಂಟನ್‌ ಕಪ್‌ ಅಂಗವಾಗಿ ಆಯೋಜಿಸಲಾಗಿದ್ದ ‘ಮೀಟ್ ಆ್ಯಂಡ್‌ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬ್ಯಾಡ್ಮಿಂಟನ್‍ನ ಉದಯೋನ್ಮುಖ ವ್ಯಕ್ತಿ ಭೇಟಿ ನೀಡುತ್ತಿದ್ದಂತೆಯೇ ಕಾರ್ಯಕ್ರಮದ ಸಂಭ್ರಮ ಮುಗಿಲುಮುಟ್ಟಿತು. ಚಿರಾಗ್ ಯುವ ಬ್ಯಾಡ್ಮಿಂಟನ್ ಉತ್ಸಾಹಿಗಳೊಂದಿಗೆ ಕೆಲ ಸಮಯ ಕಳೆದು, ಸಲಹೆಗಳನ್ನು ಹಂಚಿಕೊಂಡರು ಮತ್ತು ಅವರ ಅಂತಿಮ ಪಂದ್ಯವನ್ನು ವೀಕ್ಷಿಸಿದರು. ಬಳಿಕ ಟೂರ್ನಿಯ ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿದರು. ಕಠಿಣ ಪರಿಶ್ರಮ, ಶಿಸ್ತು ಮತ್ತು ಪ್ರೀತಿ ಪಾತ್ರರ ಅಚಲ ಬೆಂಬಲದ ಮಹತ್ವವನ್ನು ಒತ್ತಿ ಹೇಳುತ್ತಾ ಅವರು ಉನ್ನತ ಸ್ಥಾನಕ್ಕೆ ತಲುಪಲು ಬೇಕಾದ ಸಲಹೆಗಳನ್ನೂ ನೀಡಿದರು. ಕಾರ್ಯಕ್ರಮದಲ್ಲಿ ನಿಪ್ಪೊನ್‌ ಪೇಂಟ್‌ ಮುಖ್ಯಸ್ಥ ಮಹೇಶ್ ಆನಂದ್ ಸೇರಿ ಹಲವರು ಉಪಸ್ಥಿತರಿದ್ದರು.ಫಲಿತಾಂಶ:

ಪುರುಷರ ಸಿಂಗಲ್ಸ್ ವಿಜೇತ: ಮೊಹಮ್ಮದ್ ಫಿರೋಜ್, ರನ್ನರ್‌ ಅಪ್‌: ಆರಿಫ್ಡಬಲ್ಸ್ ವಿಜೇತರು: ಮಾರ್ಕ್ ಜಾನ್ ಮತ್ತು ವಿನಯ್, ರನ್ನರ್ಸ್: ಸದಾಯತ್ ಮತ್ತು ಝೀದ್ಮಹಿಳೆಯರ ಸಿಂಗಲ್ಸ್ ವಿಜೇತರು: ಇಶಿಕಾ ಜೈಸ್ವಾಲ್, ರನ್ನರ್ಸ್: ಚಿನ್ಮಯ್ಡಬಲ್ಸ್ ವಿಜೇತರು: ಲಿಪಿಕಾ ಮತ್ತು ನಿಕಿತಾ, ರನ್ನರ್ಸ್: ರಿಯಾ ಮತ್ತು ಕಾಸಿ