ಅಪಘಾತದಿಂದಾಗಿ ಕಾಲನ್ನೇ ಕತ್ತರಿಸುತ್ತಾರೆ ಎಂಬ ಭಯವಿತ್ತು: ರಿಷಭ್‌ ಪಂತ್‌

| Published : Feb 03 2024, 01:52 AM IST

ಅಪಘಾತದಿಂದಾಗಿ ಕಾಲನ್ನೇ ಕತ್ತರಿಸುತ್ತಾರೆ ಎಂಬ ಭಯವಿತ್ತು: ರಿಷಭ್‌ ಪಂತ್‌
Share this Article
  • FB
  • TW
  • Linkdin
  • Email

ಸಾರಾಂಶ

13 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿರುವ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರು ಕಾರು ಅಪಘಾತದ ಭಯಾನಕ ಅನುಭವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಅಪಘಾತದ ಬಳಿಕ ಕಾಲು ಕತ್ತರಿಸುವ ಭಯವಿತ್ತು ಎಂದಿದ್ದಾರೆ.

ನವದೆಹಲಿ: 13 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿರುವ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರು ಕಾರು ಅಪಘಾತದ ಭಯಾನಕ ಅನುಭವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಅಪಘಾತದ ಬಳಿಕ ಕಾಲು ಕತ್ತರಿಸುವ ಭಯವಿತ್ತು ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಯಾವುದೇ ನರ ತುಂಡಾಗಿದ್ದರೆ ಕಾಲು ಕತ್ತರಿಸುತ್ತಾರೆ. ಅದು ನನಗೆ ಭಯ ಉಂಟು ಮಾಡಿತ್ತು. ಆದರೆ ದೊಡ್ಡ ಅನಾಹುತ ಆಗದಿರುವುದು ನನ್ನ ಅದೃಷ್ಟ ಎಂದಿದ್ದಾರೆ. ಅಲ್ಲದೆ ವೈದ್ಯರು ನಿಗದಿಪಡಿಸಿದ ಸಮಯಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಏಕದಿನ: ಆಸ್ಟ್ರೇಲಿಯಾಕ್ಕೆ8 ವಿಕೆಟ್‌ ಭರ್ಜರಿ ಗೆಲುವುಮೆಲ್ಬರ್ನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಕೀಸ್‌ ಕಾರ್ಟಿ(88), ರೋಸ್ಟನ್‌ ಚೇಸ್‌(59) ಅರ್ಧಶತಕದಾಟದ ಹೊರತಾಗಿಯೂ 48.4 ಓವರ್‌ಗಳಲ್ಲಿ 231ಕ್ಕೆ ಆಲೌಟಾಯಿತು. ಸಾಧಾರಣ ಗುರಿ ಬೆನ್ನತ್ತಿದ ಆಸೀಸ್‌ 38.3 ಓವರ್‌ಗಳಲ್ಲಿ 2 ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು. ಕ್ಯಾಮರೂನ್‌ ಗ್ರೀನ್‌(77), ಸ್ಟೀವ್‌ ಸ್ಮಿತ್‌(79), ಜೋಶ್‌ ಇಂಗ್ಲಿಸ್‌ (65) ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದರು.