ಸಾರಾಂಶ
ಅಫ್ಘಾನಿಸ್ತಾನ ಇನ್ನೂ 42 ರನ್ ಹಿನ್ನಡೆಯಲ್ಲಿದೆ. ಸೋಮವಾರ ಮತ್ತಷ್ಟು ರನ್ ಕಲೆಹಾಕಿ ಆತಿಥೇಯರಿಗೆ ದೊಡ್ಡ ಗುರಿ ನೀಡುವ ಕಾತರದಲ್ಲಿದೆ. ಇಬ್ರಾಹಿಂ ಜತೆ ರಹ್ಮತ್ ಶಾ ಕೂಡಾ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೊಲಂಬೊ: ಇಬ್ರಾಹಿಂ ಜದ್ರಾನ್(ಔಟಾಗದೆ 101) ಹೋರಾಟದಿಂದಾಗಿ ಏಕೈಕ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಅಫ್ಘಾನಿಸ್ತಾನ ತಿರುಗೇಟು ನೀಡಿದೆ. ಆಫ್ಘನ್‌ನ 198 ರನ್‌ಗೆ ಉತ್ತರವಾಗಿ ಲಂಕಾ ಭಾನುವಾರ 439 ರನ್ ಕಲೆಹಾಕಿ, 241 ರನ್ ಮುನ್ನಡೆ ಪಡೆಯಿತು. ಭಾರೀ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಫ್ಘನ್, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 199 ರನ್ ಕಲೆಹಾಕಿದೆ. ಜದ್ರಾನ್ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.ತಂಡ ಇನ್ನೂ 42 ರನ್ ಹಿನ್ನಡೆಯಲ್ಲಿದ್ದು, ಸೋಮವಾರ ಮತ್ತಷ್ಟು ರನ್ ಕಲೆಹಾಕಿ ಆತಿಥೇಯರಿಗೆ ದೊಡ್ಡ ಗುರಿ ನೀಡುವ ಕಾತರದಲ್ಲಿದೆ. ಇಬ್ರಾಹಿಂ ಜತೆ ರಹ್ಮತ್ ಶಾ(46) 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನೂರ್ ಅಲಿ ಜದ್ರಾನ್ 47 ರನ್ ಕೊಡುಗೆ ನೀಡಿದರು.
-ವಿಂಡೀಸ್ ವಿರುದ್ಧ ಆಸೀಸ್‌ಗೆ ಗೆಲುವು ಸಿಡ್ನಿ: ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 83 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶಪಡಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಆಸೀಸ್, ಶಾನ್ ಅಬಾಟ್(69) ಹಾಗೂ ಮ್ಯಾಥ್ಯೂ ಶಾರ್ಟ್(41) ಹೋರಾಟದಿಂದಾಗಿ 9 ವಿಕೆಟ್‌ಗೆ 258 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿಂಡೀಸ್, 43.3 ಓವರ್‌ಗಳಲ್ಲಿ 175ಕ್ಕೆ ಆಲೌಟಾಯಿತು. ಬೌಲಿಂಗ್‌ನಲ್ಲೂ ಮಿಂಚಿದ ಅಬಾಟ್ 3 ವಿಕೆಟ್ ಕಿತ್ತರು.