ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಬೂಮ್ರಾರನ್ನು ಹಿಂದಿಕ್ಕಿ ಅಶ್ವಿನ್‌ ನಂ.1

| Published : Mar 14 2024, 02:02 AM IST

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಬೂಮ್ರಾರನ್ನು ಹಿಂದಿಕ್ಕಿ ಅಶ್ವಿನ್‌ ನಂ.1
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗಷ್ಟೇ ವೇಗಿ ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನಕ್ಕೆರಿದ್ದರು. ಅವರನ್ನು ಅಶ್ವಿನ್‌ ಹಿಂದಿಕ್ಕಿದ್ದಾರೆ. 2 ಸ್ಥಾನ ಕುಸಿತ ಕಂಡಿರುವ ಬೂಮ್ರಾ ಸದ್ಯ 3ನೇ ಸ್ಥಾನದಲ್ಲಿದ್ದಾರೆ.

ದುಬೈ: ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ 100 ಟೆಸ್ಟ್‌ ಹಾಗೂ 500 ವಿಕೆಟ್‌ಗಳ ಮೈಲುಗಲ್ಲು ಸಾಧಿಸಿದ್ದ ಭಾರತದ ಹಿರಿಯ ಸ್ಪಿನ್ನರ್‌ ಆರ್.ಅಶ್ವಿನ್‌ ಐಸಿಸಿ ಟೆಸ್ಟ್‌ ಬೌಲರ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ಅಗ್ರಸ್ಥಾನಕ್ಕೆರಿದ್ದ ವೇಗಿ ಜಸ್‌ಪ್ರೀತ್‌ ಬೂಮ್ರಾರನ್ನು ಅಶ್ವಿನ್‌ ಹಿಂದಿಕ್ಕಿದ್ದಾರೆ.ಇಂಗ್ಲೆಂಡ್‌ ವಿರುದ್ಧ ಕೊನೆ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ ಪಡೆದಿದ್ದ ಅಶ್ವಿನ್‌, ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 870 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ತಲಾ 847 ಅಂಕ ಹೊಂದಿರುವ ಆಸ್ಟ್ರೇಲಿಯಾ ಜೋಶ್‌ ಹೇಜಲ್‌ವುಡ್‌ ಹಾಗೂ ಜಸ್‌ಪ್ರೀತ್‌ ಬೂಮ್ರಾ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿದ್ದಾರೆ. ಆಲ್ರೌಂಡರ್‌ ರವೀಂದ್ರ ಜಡೇಜಾ 7ನೇ ಸ್ಥಾನದಲ್ಲಿದ್ದು, ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ 15 ಸ್ಥಾನ ಮೇಲೇರಿ 16ನೇ ಸ್ಥಾನ ಪಡೆದಿದ್ದಾರೆ.ಇನ್ನು ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ನಾಯಕ ರೋಹಿತ್‌ ಶರ್ಮಾ ಮತ್ತೆ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 5 ಸ್ಥಾನ ಜಿಗಿತ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಯುವ ಬ್ಯಾಟರ್‌ ಯಶಸ್ವಿ ಜೈಶ್ವಾಲ್‌ 2 ಸ್ಥಾನ ಮೇಲೇರಿ 8ನೇ ಸ್ಥಾನ ಪಡೆದರೆ, ಇಂಗ್ಲೆಂಡ್‌ ಸರಣಿಗೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ 1 ಸ್ಥಾನ ಕುಸಿತ ಕಂಡು 9ನೇ ಸ್ಥಾನದಲ್ಲಿದ್ದಾರೆ. 11 ಸ್ಥಾನ ಮೇಲೇರಿದ ಶುಭ್‌ಮನ್‌ ಗಿಲ್‌ ಜಂಟಿ 20ನೇ ಸ್ಥಾನಕ್ಕೇರಿದ್ದಾರೆ.