ಸಾರಾಂಶ
ನವದೆಹಲಿ: ಐಪಿಎಲ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಆಟಗಾರ ನಿಯಮದ ಬಗ್ಗೆ ರೋಹಿತ್ ಶರ್ಮಾ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವೀಕ್ಷಕರಿಗೆ ಮನರಂಜನೆ ಒದಗಿಸಬಹುದು. ಆದರೆ ಕೋಚ್‌ಗಳು ಹಾಗೂ ಆಟಗಾರರಿಗೆ ಸೂಕ್ತವಲ್ಲ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇಂಪ್ಯಾಕ್ಟ್ ನಿಯಮದ ಬಗ್ಗೆ ರೋಹಿತ್ ಮಾತನಾಡಿದ್ದು ಗಮನಿಸಿದ್ದೇನೆ. ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡದ ಉದಾಹರಣೆಗಳನ್ನು ರೋಹಿತ್ ನೀಡಿದ್ದಾರೆ. ಇಂಪ್ಯಾಕ್ಟ್ ನಿಯಮ ಆಲ್ರೌಂಡರ್‌ಗಳನ್ನು ಪಂದ್ಯದಿಂದ ಹೊರಗಿಡುತ್ತಿದೆ. ಆದರೆ ಇದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಹೀಗಾಗಿ ಏನೂ ಮಾಡಲಾಗದು’ ಎಂದು ಅವರು ಹೇಳಿದ್ದಾರೆ.ಬುಧವಾರ ಇಂಪ್ಯಾಕ್ಟ್ ನಿಯಮದ ಬಗ್ಗೆ ರೋಹಿತ್ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಈ ಆಟಗಾರ ನಿಯಮದ ಬಗ್ಗೆ ನನಗೆ ಸಂತೃಪ್ತಿಯಿಲ್ಲ. ಇದು ಮನರಂಜನೆ ಒದಗಿಸಬಹುದು. ಆದರೆ ಭಾರತೀಯ ಕ್ರಿಕೆಟ್‌ಗೆ ಇದರಿಂದ ನಷ್ಟವಾಗಲಿದೆ. ವಾಷಿಂಗ್ಟನ್ ಸುಂದರ್, ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್‌ಗಳಿಗೆ ಬೌಲಿಂಗ್ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಿಧಾನ ಬೌಲಿಂಗ್: ಮುಂಬೈ ನಾಯಕ ಹಾರ್ದಿಕ್‌ಗೆ ದಂಡ
ಮುಲ್ಲಾನ್‌ಪುರ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ₹12 ಲಕ್ಷ ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮುಂಬೈ 9 ರನ್ ರೋಚಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ಏ.22ರಂದು ರಾಜಸ್ಥಾನ ವಿರುದ್ಧ ಸೆಣಸಾಡಲಿದೆ.