ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯ: ಭಾರತಕ್ಕೆ ಸರಣಿ ಸಮಬಲ ಗುರಿ

| Published : Feb 02 2024, 01:08 AM IST / Updated: Feb 02 2024, 01:21 PM IST

Team India
ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯ: ಭಾರತಕ್ಕೆ ಸರಣಿ ಸಮಬಲ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಪಂದ್ಯದ ಸೋಲಿನಿಂದ ಆತ್ಮವಿಶ್ವಾಸ ಕಳೆದುಕೊಂಡಂತಿರುವ ಟೀಂ ಇಂಡಿಯಾ, ಶುಕ್ರವಾರದಿಂದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ವಿಶಾಖಪಟ್ಟಣಂ: ಮೊದಲ ಪಂದ್ಯದ ಸೋಲಿನಿಂದ ಆತ್ಮವಿಶ್ವಾಸ ಕಳೆದುಕೊಂಡಂತಿರುವ ಟೀಂ ಇಂಡಿಯಾ, ಶುಕ್ರವಾರದಿಂದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 

ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿ ಸರಣಿ ಸಮಬಲಗೊಳಿಸಲು ಭಾರತ ಕಾಯುತ್ತಿದ್ದರೆ, ಇಂಗ್ಲೆಂಡ್‌ ಮತ್ತೊಂದು ಜಯದ ಮೂಲಕ 2-0 ಮುನ್ನಡೆಯ ಕಾತರದಲ್ಲಿದೆ.ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ ಗೈರಾಗಲಿರುವ ಕಾರಣ ಈ ಪಂದ್ಯದಲ್ಲಿ ಭಾರತ ಆಯ್ಕೆ ಗೊಂದಲದಲ್ಲಿದೆ. 

ಸರ್ಫರಾಜ್‌ ಖಾನ್‌, ರಜತ್‌ ಪಾಟೀದಾರ್‌ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. ವಿಶಾಖಪಟ್ಟಣಂ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವುದಾದರೆ ಬೌಲಿಂಗ್‌ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಬಹುದು.

ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಕಳಪೆ ಲಯದಲ್ಲಿದ್ದು, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಅನಿವಾರ್ಯತೆ ಇದೆ.

ಪಂದ್ಯ: ಬೆಳಗ್ಗೆ 9.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

ಇಂಗ್ಲೆಂಡ್‌ ತಂಡಕ್ಕೆವೇಗಿ ಆಂಡರ್‌ಸನ್‌2ನೇ ಪಂದ್ಯಕ್ಕೆ ಇಂಗ್ಲೆಂಡ್‌ ಆಡುವ 11ರ ಬಳಗ ಪ್ರಕಟಗೊಂಡಿದ್ದು, ಅನುಭವಿ ಜೇಮ್ಸ್‌ ಆ್ಯಂಡರ್‌ಸನ್‌ ತಂಡಕ್ಕೆ ಮರಳಿದ್ದಾರೆ. ಮಾರ್ಕ್‌ ವುಡ್‌ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಾಯದ ಕಾರಣಕ್ಕೆ ಜ್ಯಾಕ್‌ ಲೀಚ್‌ ಗೈರಾಗಲಿದ್ದು, ಶೋಯೆಬ್‌ ಬಶೀರ್‌ ಪಾದಾರ್ಪಣೆ ಮಾಡಲಿದ್ದಾರೆ. ಉಳಿದಂತೆ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ಗೂ ಕೊಹ್ಲಿ ಗೈರು?
ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಸರಣಿಯ ಆರಂಭಿಕ 2 ಪಂದ್ಯಗಳಿಂದ ಹೊರಗುಳಿದಿರುವ ಭಾರತದ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಸರಣಿಯ 3ನೇ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಸರಣಿಗೂ ಮುನ್ನ ತಂಡದ ಜೊತೆಗಿದ್ದ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಮೊದಲೆರಡು ಪಂದ್ಯಕ್ಕೆ ಗೈರಾಗಿದ್ದಾರೆ. ವರದಿಗಳ ಪ್ರಕಾರ ಕೊಹ್ಲಿ ಸದ್ಯ ಭಾರತದಲ್ಲಿ ಇಲ್ಲ. ಅವರು ಯಾವಾಗ ಮರಳುತ್ತಾರೆ ಮತ್ತು ತಂಡ ಕೂಡಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಹೇಳಲಾಗುತ್ತಿದೆ.