ವಿಶ್ರಾಂತಿ ಬಳಿಕ ಧರ್ಮಶಾಲಾ ಟೆಸ್ಟ್‌ಗೆ ಭಾರತ, ಇಂಗ್ಲೆಂಡ್‌ ಆಟಗಾರರ ಸಜ್ಜು

| Published : Mar 04 2024, 01:15 AM IST / Updated: Mar 04 2024, 10:42 AM IST

ವಿಶ್ರಾಂತಿ ಬಳಿಕ ಧರ್ಮಶಾಲಾ ಟೆಸ್ಟ್‌ಗೆ ಭಾರತ, ಇಂಗ್ಲೆಂಡ್‌ ಆಟಗಾರರ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

4ನೇ ಟೆಸ್ಟ್‌ ಪಂದ್ಯದ ಬಳಿಕ ಕೆಲ ಭಾರತೀಯ ಆಟಗಾರರು ತವರಿಗೆ ತೆರಳಿದ್ದರು. ಅತ್ತ ಇಂಗ್ಲೆಂಡ್‌ ಆಟಗಾರರು ಬೆಂಗಳೂರು ಹಾಗೂ ಚಂಡೀಗಢದಲ್ಲಿ ಕಾಲ ಕಳೆದಿದ್ದರು. ಭಾನುವಾರ ಸಂಜೆ ಮತ್ತೆ ಧರ್ಮಶಾಲಾದಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.

ಧರ್ಮಶಾಲಾ: 4ನೇ ಟೆಸ್ಟ್‌ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್‌ ಆಟಗಾರರು ಸರಣಿಯ ಕೊನೆ ಟೆಸ್ಟ್‌ ಪಂದ್ಯಕ್ಕಾಗಿ ಭಾನುವಾರ ಧರ್ಮಶಾಲಾಗೆ ಆಗಮಿಸಿದ್ದಾರೆ.

 ಮಾ.7ರಿಂದ ಆರಂಭಗೊಳ್ಳಲಿರುವ ಟೆಸ್ಟ್‌ಗೆ ಸೋಮವಾರದಿಂದ ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಲಿದ್ದಾರೆ.

ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್‌ ಪಂದ್ಯದ ಬಳಿಕ ಕೆಲ ಭಾರತೀಯ ಆಟಗಾರರು ತವರಿಗೆ ತೆರಳಿದ್ದರು. ಅತ್ತ ಇಂಗ್ಲೆಂಡ್‌ ಆಟಗಾರರು ಬೆಂಗಳೂರು ಹಾಗೂ ಚಂಡೀಗಢದಲ್ಲಿ ಕಾಲ ಕಳೆದಿದ್ದರು. 

ಸದ್ಯ 5ನೇ ಟೆಸ್ಟ್‌ಗಾಗಿ ಭಾನುವಾರ ಸಂಜೆ ಮತ್ತೆ ಧರ್ಮಶಾಲಾದಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.ಸೋಮವಾರ ಬೆಳಗ್ಗೆ ಭಾರತೀಯ ಆಟಗಾರರ ಅಭ್ಯಾಸ ನಿಗದಿಯಾಗಿದೆ. 

ಆದರೆ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಧರ್ಮಶಾಲಾದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಕೆಲ ದಿನ ವರ್ಷಧಾರೆಯಾಗುವ ಮುನ್ಸೂಚನೆ ಇದೆ.

ಸದ್ಯ ಸರಣಿಯಲ್ಲಿ ಭಾರತ 3-1 ಮುನ್ನಡೆ ಕಾಯ್ದುಕೊಂಡಿದ್ದು, ಕೊನೆ ಟೆಸ್ಟ್‌ನಲ್ಲೂ ಗೆಲ್ಲುವ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ. 

ಅತ್ತ ಇಂಗ್ಲೆಂಡ್‌ ಆರಂಭಿಕ ಟೆಸ್ಟ್‌ನ ಗೆಲುವಿನ ಹೊರತಾಗಿಯೂ ಹ್ಯಾಟ್ರಿಕ್‌ ಸೋಲನುಭವಿಸಿದ್ದು, ಗೆಲುವಿನೊಂದಿಗೆ ಭಾರತ ಪ್ರವಾಸ ಕೊನೆಗೊಳಿಸುವ ಕಾತರದಲ್ಲಿದೆ.