ಸಾರಾಂಶ
ನವದೆಹಲಿ: ಟೀಂ ಇಂಡಿಯಾದ 2024-25ರ ತವರಿನ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಈ ಅವಧಿಯಲ್ಲಿ ಭಾರತ ತಂಡ 5 ಟೆಸ್ಟ್, 3 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನಾಡಲಿದೆ ಎಂದು ಮಂಡಳಿ ತಿಳಿಸಿದೆ.
ಸದ್ಯ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದು, ಬಳಿಕ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಸೆಪ್ಟೆಂಬರ್‌ನಿಂದ ಭಾರತ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಪಂದ್ಯಗಳನ್ನು ಆಡಲಿದೆ. ಪಂದ್ಯಗಳಿಗೆ ಬೆಂಗಳೂರು ಸೇರಿ ಒಟ್ಟು 13 ನಗರಗಳು ಆತಿಥ್ಯ ವಹಿಸಲಿವೆ.ಬಾಂಗ್ಲಾ ವಿರುದ್ಧ 2 ಟೆಸ್ಟ್ ಹಾಗೂ 3 ಟಿ20, ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್, ಇಂಗ್ಲೆಂಡ್ ವಿರುದ್ಧ 5 ಟಿ20, 3 ಏಕದಿನ ಪಂದ್ಯಗಳ ಸರಣಿ ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ vs ಬಾಂಗ್ಲಾ ಸರಣಿ
ಪಂದ್ಯದಿನಾಂಕಸ್ಥಳ1ನೇ ಟೆಸ್ಟ್‌ಸೆ.19-ಸೆ.23ಚೆನ್ನೈ2ನೇ ಟೆಸ್ಟ್‌ಸೆ.27-ಅ.1ಕಾನ್ಪುರ1ನೇ ಟಿ20ಅ.6ಧರ್ಮಶಾಲಾ2ನೇ ಟಿ20ಅ.9ನವದೆಹಲಿ3ನೇ ಟಿ20ಅ.12ಹೈದರಾಬಾದ್
ಭಾರತ vs ನ್ಯೂಜಿಲೆಂಡ್ ಸರಣಿ
ಪಂದ್ಯದಿನಾಂಕಸ್ಥಳ1ನೇ ಟೆಸ್ಟ್‌ಅ.16-ಅ.20ಬೆಂಗಳೂರು2ನೇ ಟೆಸ್ಟ್‌ಅ.24-ಅ.28ಪುಣೆ3ನೇ ಟೆಸ್ಟ್‌ನ.1-ನ.5ಮುಂಬೈ
ಭಾರತ vs ಇಂಗ್ಲೆಂಡ್ ಸರಣಿ
ಪಂದ್ಯದಿನಾಂಕಸ್ಥಳ1ನೇ ಟಿ20ಜ.22ಚೆನ್ನೈ2ನೇ ಟಿ20ಜ.25ಕೋಲ್ಕತಾ3ನೇ ಟಿ20ಜ.28ರಾಜ್‌ಕೋಟ್4ನೇ ಟಿ20ಜ.31ಪುಣೆ5ನೇ ಟಿ20ಫೆ.2ಮುಂಬೈ1ನೇ ಏಕದಿನಫೆ.6ನಾಗ್ಪುರ2ನೇ ಏಕದಿನಫೆ.9ಕಟಕ್3ನೇ ಏಕದಿನಫೆ.12ಅಹ್ಮದಾಬಾದ್
ಬೆಂಗಳೂರಲ್ಲಿ ಕಿವೀಸ್ ವಿರುದ್ಧ ಟೆಸ್ಟ್
2024-25ರ ಸೆಪ್ಟೆಂಬರ್‌ನಿಂದ ಫೆಬ್ರವರಿ ವರೆಗಿನ ಭಾರತದ ತವರಿನ ಪಂದ್ಯಗಳ ಪೈಕಿ ಒಂದು ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 16ರಿಂದ 20ರ ವರೆಗೆ ನಡೆಯಲಿರುವ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿದೆ.