ಸಾರಾಂಶ
ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿ, ಟೆಸ್ಟ್ ಸರಣಿಯನ್ನೂ ಗೆದ್ದಿರುವ ಭಾರತ ತಂಡ ಶುಕ್ರವಾರದಿಂದ ಪ್ರವಾಸಿ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸರಣಿಗೆ ಚೆನ್ನೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಜು.19ರಿಂದ ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಅದಕ್ಕೂ ಮುನ್ನ ಭಾರತ ತಂಡ ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಕೊಳ್ಳುವ ನಿರೀಕ್ಷೆಯಲ್ಲಿದೆ.
2023ರ ಬಳಿಕ ಭಾರತ 7 ಟಿ20 ಸರಣಿಗಳನ್ನಾಡಿದ್ದು, 3ರಲ್ಲಿ ಗೆದ್ದಿದ್ದರೆ 4 ಸರಣಿಗಳಲ್ಲಿ ಸೋತಿವೆ. ಸದ್ಯ ತವರಿನಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸಲ್ಲಿದೆ. ಅತ್ತ ದ.ಆಫ್ರಿಕಾ ಏಕದಿನ, ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.ಸ್ಮೃತಿ ಮಂಧನಾ ಅಭೂತಪೂರ್ವ ಲಯದಲ್ಲಿದ್ದು, ಶಫಾಲಿ ವರ್ಮಾ, ನಾಯಕಿ ಹರ್ಮನ್‌ಪ್ರೀತ್, ರಿಚಾ ಘೋಷ್, ಜೆಮಿಮಾ ರೋಡ್ರಿಗ್ಸ್, ಕರ್ನಾಟಕದ ಯುವ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ
.ಪಂದ್ಯ: ಸಂಜೆ 7 ಗಂಟೆಗೆ, ನೇರಪ್ರಸಾರ: ಜಿಯೋ ಸಿನಿಮಾ
ಐಸಿಸಿ ತಿಂಗಳ ಆಟಗಾರ ರೇಸಲ್ಲಿ ಬೂಮ್ರಾ, ರೋಹಿತ್
ದುಬೈ: ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬೂಮ್ರಾ ಐಸಿಸಿ ಜೂನ್ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ರೋಹಿತ್ ಟೂರ್ನಿಯಲ್ಲಿ 257 ರನ್ ಕಲೆಹಾಕಿದ್ದರೆ, ಬೂಮ್ರಾ 15 ವಿಕೆಟ್ ಕಬಳಿಸಿದ್ದರು. ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ರೋಹಿತ್, ಬೂಮ್ರಾ ಜೊತೆ ಅಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಾಜ್ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.