ಸಾರಾಂಶ
ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯು ಮಂಗಳವಾರದಿಂದ ಅರಂಭವಾಗಲಿದೆ, ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ, ಆಶ್ವಿನಿ ಪೊನ್ನಪ್ಪ- ತನೀಶಾ ಕ್ರಾಸ್ಟೋ ಮತ್ತು ಗಾಯತ್ರಿ ಗೋಪಿಚಂದ- ತ್ರೀಸಾ ಜೋಲಿ ಸೇರಿದಂತೆ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್ ಮೇಲೆ ನಿರೀಕ್ಷೆ ಇದೆ.
ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯು ಮಂಗಳವಾರದಿಂದ ಅರಂಭವಾಗಲಿದ್ದು, ಕಳೆದ ವಾರವಷ್ಟೇ ಮಲೇಷ್ಯಾ ಓಪನ್‌ನಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಮೇಲೆ ಭಾರಿ ನಿರೀಕ್ಷೆ ಇದೆ. ಸೂಪರ್ 750ಕ್ಕೆ ಬಡ್ತಿ ಹೊಂದಿರುವ ಟೂರ್ನಿಯು ಕಳೆದ ಋುತುವಿನಲ್ಲಿ ಎರಡನೇ ಸುತ್ತು ದಾಟದ ಭಾರತೀಯ ಷಟ್ಲರ್‌ಗಳಿಗೆ ಹೊಸ ಉತ್ಸಾಗ ತಂದಿದೆ.
ಕಳೆದ ಬಾರಿ ಗಾಯದ ಕಾರಣ ಕಾರಣದಿಂದ ಎರಡನೇ ಸುತ್ತಿನಲ್ಲೇ ಹೊರನಡೆದಿದ್ದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಈ ಬಾರಿ ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.25 ಚೈನಿಸ್ ತೈಪೆನ ಫಾಂಗ್ ಜೆನ್ ಲಿ-ಫಾಂಗ್ ಚೇ ಲೀ ಅವರನ್ನು ಎದುರಿಸಲಿದ್ದಾರೆ. "ನಾವು ವಿಶ್ರಮಿಸುವುದಿಲ್ಲ. ತವರಿನ ಅಭಿಮಾನಿಗಳೆದುರು ನಾವು ದೇಶಕ್ಕಾಗಿ ಚನ್ನಾಗಿ ಆಡಬೇಕಿದೆ " ಎಂದು ಸಾತ್ವಿಕ್ ತಿಳಿಸಿದ್ದಾರೆ.ಭಾರತೀಯ ತಾರಾ ಆಟಗಾರರಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್ ಲಯ ಕಂಡುಕೊಳ್ಳಲು ಕಾತರರಾಗಿದ್ದಾರೆ. ಆಶ್ವಿನಿ ಪೊನ್ನಪ್ಪ- ತನೀಶಾ ಕ್ರಾಸ್ಟೋ ಮತ್ತು ಗಾಯತ್ರಿ ಗೋಪಿಚಂದ- ತ್ರೀಸಾ ಜೋಲಿ ಜೋಡಿ ಟೂರ್ನಿಯಲ್ಲಿ ಭಾಗಿಯಾಗಲಿದೆ.ವಿಕ್ಟರ್ ಆ್ಯಕ್ಸ್‌ಲ್ಸ್‌ನ್ ಗೈರು:
ವಿಶ್ವ ನಂ.1 ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸ್‌ಲ್ಸ್‌ನ್ ಇಂಡಿಯಾ ಓಪನ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಮಲೆಷ್ಯಾ ಓಪನ್ ಟೂರ್ನಿಯಲ್ಲಿ ಅವರು ಆಡುತ್ತಿರುವಾಗಲೇ ಅಸ್ವಸ್ಥರಾಗಿದ್ದರು.