ಭಾರತ 4X400 ಮೀ. ಮಿಶ್ರ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ

| Published : May 21 2024, 12:34 AM IST / Updated: May 21 2024, 04:27 AM IST

ಸಾರಾಂಶ

ಭಾರತ ಮಿಶ್ರ ರಿಲೇ ತಂಡದಿಂದ ಮತ್ತೊಮ್ಮೆ ರಾಷ್ಟ್ರೀಯ ದಾಖಲೆ. ಬ್ಯಾಂಕಾಕ್‌ನಲ್ಲಿ ದಾಖಲೆ ಬರೆದ ಮುಹಮ್ಮದ್‌ ಅಜ್ಮಲ್‌, ಜ್ಯೋತಿಕಾ ಶ್ರೀ ದಂಡಿ, ಅಮೋಲ್‌ ಜೇಕಬ್‌, ಶುಭಾ ವೆಂಕಟೇಶನ್‌ ಅವರಿದ್ದ ತಂಡ.

ಬ್ಯಾಂಕಾಕ್‌: ಭಾರತದ 4X400 ಮೀ. ಮಿಶ್ರ ರಿಲೇ ತಂಡ ಇಲ್ಲಿ ನಡೆಯುತ್ತಿರುವ ಉದ್ಘಾಟನಾ ಆವೃತ್ತಿಯ ಏಷ್ಯನ್‌ ರಿಲೇ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದೆ. 

ಆದರೆ, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತಂಡ ವಿಫಲವಾಗಿದೆ. ಸೋಮವಾರ ನಡೆದ ಸ್ಪರ್ಧೆಯಲ್ಲಿ ಮುಹಮ್ಮದ್‌ ಅಜ್ಮಲ್‌, ಜ್ಯೋತಿಕಾ ಶ್ರೀ ದಂಡಿ, ಅಮೋಲ್‌ ಜೇಕಬ್‌ ಹಾಗೂ ಶುಭಾ ವೆಂಕಟೇಶನ್‌ ಅವರಿದ್ದ ತಂಡ 3 ನಿಮಿಷ 14.12 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿತು. 

ಈ ಮೊದಲು ಭಾರತ ತಂಡ ಹಾಂಗ್ಝೋ ಏಷ್ಯನ್‌ ಗೇಮ್ಸ್‌ನಲ್ಲಿ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ರಾಷ್ಟ್ರೀಯ ದಾಖಲೆ ಎನಿಸಿತ್ತು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು 3 ನಿಮಿಷ 13.56 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಬೇಕಿತ್ತು.