ಸಾರಾಂಶ
ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ನಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದೆ.
ದುಬೈ: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ನಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಭಾರತದ ವಿರುದ್ಧ ಸತತ ಸೋಲು ಕಂಡಿರುವ ಇಂಗ್ಲೆಂಡ್ 19.44 ಜಯದ ಪ್ರತಿ ಶತದೊಂದಿಗೆ 8 ಸ್ಥಾನದಲ್ಲಿದೆ. 2023-25ರ ಡಬ್ಲ್ಯುಟಿಸಿ ಅವಧಿಯಲ್ಲಿ ಇದುವರೆಗೂ 8 ಟೆಸ್ಟ್ ಆಡಿರುವ ಭಾರತ 5ರಲ್ಲಿ ಜಯ, 2ರಲ್ಲಿ ಸೋಲು ಮತ್ತು ಒಂದರಲ್ಲೂ ಡ್ರಾ ಸಾಧಿಸಿದ್ದು, 4ನೇ ಟೆಸ್ಟ್‌ನಡ ಗೆಲುವಿನೊಂದಿಗೆ ಜಯದ ಪ್ರತಿಶತ 64.58ಕ್ಕೆ ಏರಿಕೆಯಾಗಿದೆ. 75.0 ಜಯದ ಪ್ರತಿಶತ ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 3ನೇ, ಬಾಂಗ್ಲಾದೇಶ 4ನೇ, ಪಾಕಿಸ್ತಾನ 5, ವೆಸ್ಟ್ ಇಂಡೀಸ್ 6, ದಕ್ಷಿಣ ಆಫ್ರಿಕಾ 7ನೇ ಸ್ಥಾನದಲ್ಲಿದೆ.
ಬೆಂಗ್ಳೂರು, ಚಂಡೀಗಢದಲ್ಲಿ ಇಂಗ್ಲೆಂಡ್ ತಂಡ ವಿಶ್ರಾಂತಿರಾಂಚಿ: ಭಾರತದ ವಿರುದ್ಧ ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ಗೆ 1 ವಾರ ಬಿಡುವು ಇರುವುದರಿಂದ ಇಂಗ್ಲೆಂಡ್ ಆಟಗಾರರು ಚಂಡೀಗಢ ಮತ್ತು ಬೆಂಗಳೂರಿನಲ್ಲಿ ಕಾಲ ಕಳೆಯಲಿದ್ದಾರೆ. 2ನೇ ಟೆಸ್ಟ್‌ನ ನಂತರ ಸಿಕ್ಕ ದೀರ್ಘ ವಿರಾಮವನ್ನು ಅಬು ಧಾಬಿಯಲ್ಲಿ ಕಳೆದಿದ್ದ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಆಟಗಾರರು, ಸದ್ಯ ಭಾರತದಲ್ಲೇ ನೆಲೆಸಲು ನಿರ್ಧರಿಸಿದ್ದಾರೆ. 2 ನಗರಗಳಲ್ಲಿ ವಿಶ್ರಾಂತಿ ಪಡೆಯಲಿರುವ ಆಟಗಾರರು ಮಾ.4ರಂದು ಧರ್ಮಶಾಲಾದಲ್ಲಿ ಒಟ್ಟುಗೂಡಲಿದ್ದಾರೆ.