ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೆ 5 ಪದಕ ಗೆದ್ದಿದೆ. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಕ ನಿರೀಕ್ಷಿತ ಚಿನ್ನದ ಹೊರತಾಗಿ ಬೇರೆ ಕ್ರೀಡೆಗಳಲ್ಲಿ ಭಾರತೀಯರಿಗೆ ಇನ್ನೂ ಬಂಗಾರದ ಭಾಗ್ಯ ಲಭಿಸಿಲ್ಲ. ಗೇಮ್ಸ್‌ನ 5 ದಿನಗಳಲ್ಲಿ ಭಾರತ ಒಟ್ಟು 17 ಪದಕ ಗೆದ್ದಿದೆ.

ನಗೋಯಾ(ಜಪಾನ್): ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೆ 5 ಪದಕ ಗೆದ್ದಿದೆ. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಕ ನಿರೀಕ್ಷಿತ ಚಿನ್ನದ ಹೊರತಾಗಿ ಬೇರೆ ಕ್ರೀಡೆಗಳಲ್ಲಿ ಭಾರತೀಯರಿಗೆ ಇನ್ನೂ ಬಂಗಾರದ ಭಾಗ್ಯ ಲಭಿಸಿಲ್ಲ. ಗೇಮ್ಸ್‌ನ 5 ದಿನಗಳಲ್ಲಿ ಭಾರತ ಒಟ್ಟು 17 ಪದಕ ಗೆದ್ದಿದೆ.

ಆದರೆ ಪಟ್ಟಿಯಲ್ಲಿ ಮಂಗಳವಾರ 8ನೇ ಸ್ಥಾನಕ್ಕೇರಿದ ದೇಶ, ಈಗ 15ನೇ ಸ್ಥಾನಕ್ಕೆ ಕುಸಿದಿದೆ. ಇದೇ ವೇಳೆ ಚೀನಾ ತನ್ನ ಅಧಿಪತ್ಯ ಮುಂದುವರಿಸಿದ್ದು, ಪದಕ ಗಳಿಕೆಯಲ್ಲಿ 125ರ ಗಡಿ ದಾಟಿದೆ.

ಭಾರತ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, ಕಂಚು

ಗುರುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, ಕಂಚು, ವುಶು ಕ್ರೀಡೆಗಳಲ್ಲಿ ಬೆಳ್ಳಿ ಸಾಧನೆ ಮಾಡಿದರೆ, ಸ್ಕೀಟ್‌ ಶೂಟಿಂಗ್‌ ಹಾಗೂ ರೋಯಿಂಗ್‌ನಲ್ಲಿ ಕಂಚು ಪಡೆಯಿತು. ಸದ್ಯ ಭಾರತದ ಬಳಿ 1 ಚಿನ್ನ, 7 ಬೆಳ್ಳಿ, 9 ಕಂಚಿನ ಪದಕಗಳಿವೆ.

ರೋಶಿಬಿನಾ 2ನೇ ಸಲ ಬೆಳ್ಳಿ ಸಾಧನೆ

ಮಹಿಳೆಯರ ವುಶು ಕ್ರೀಡೆಯಲ್ಲಿ 60 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ರೋಶಿಬಿನಾ ದೇವಿ ಫೈನಲ್‌ನಲ್ಲಿ ಚೀನಾದ ಝಾಂಗ್‌ ಕ್ಷಿಯಾಯು ವಿರುದ್ಧ 0-2 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇದು ಏಷ್ಯಾಡ್‌ನಲ್ಲಿ ರೋಶಿಬಿನಾ ಗೆದ್ದ 2ನೇ ಬೆಳ್ಳಿ ಮತ್ತು ಒಟ್ಟಾರೆ 3ನೇ ಪದಕ. 2018ರಲ್ಲಿ ಕಂಚು ಜಯಿಸಿದ್ದ ಅವರು, 2023ರಲ್ಲಿ ಬೆಳ್ಳಿ ಪಡೆದಿದ್ದರು. ಆದರೆ ಇತರ ವುಶು ಸ್ಪರ್ಧಿಗಳು ನೀರಸ ಪ್ರದರ್ಶನ ತೋರಿ ಪದಕ ಗೆಲ್ಲಲು ವಿಫಲರಾದರು.