ಭಾರತ ಚಾಂಪಿಯನ್ನರ ಚಾಂಪಿಯನ್‌! - ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ರೋಚಕ ಜಯ

| N/A | Published : Mar 10 2025, 04:27 AM IST

Champions Trophy tournament White coat history
ಭಾರತ ಚಾಂಪಿಯನ್ನರ ಚಾಂಪಿಯನ್‌! - ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ರೋಚಕ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ದುಬೈನಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದ ಕ್ಷಣ

 ದುಬೈ : ಭಾನುವಾರ ದುಬೈನಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದ ಕ್ಷಣ. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 50 ಓವರಲ್ಲಿ 7 ವಿಕೆಟ್‌ಗೆ 251 ರನ್‌ ಗಳಿಸಿತ್ತು. ಭಾರತ 49 ಓವರಲ್ಲಿ 6 ವಿಕೆಟ್‌ಗೆ 254 ರನ್‌ ಗಳಿಸಿ ಜಯಿಸಿತು. ನಾಯಕ ರೋಹಿತ್‌ ಶರ್ಮಾ ಆಕರ್ಷಕ 76 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

03ನೇ ಟ್ರೋಫಿ

ಭಾರತಕ್ಕಿದು 3ನೇ ಐಸಿಸಿ ಚಾಂಪಿಯನ್ಸ್‌ ಟ್ರೋಫಿ. 2000, 2013ರಲ್ಲೂ ಭಾರತ ಪ್ರಶಸ್ತಿ ಜಯಿಸಿತ್ತು.

01ನೇ ತಂಡ

3 ಬಾರಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಮೊದಲ ತಂಡ ಭಾರತ.

07ನೇ ಟ್ರೋಫಿ

ಭಾರತಕ್ಕಿದು 7ನೇ ಐಸಿಸಿ ಟ್ರೋಫಿ. 1983, 2011ರಲ್ಲಿ ಏಕದಿನ ವಿಶ್ವಕಪ್‌, 2007, 2024ರಲ್ಲಿ ಟಿ20 ವಿಶ್ವಕಪ್‌, 2000, 2013, 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಜಯ.

05ನೇ ಸೋಲು

ನ್ಯೂಜಿಲೆಂಡ್‌ಗೆ ಇದು ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 5ನೇ ಸೋಲು.

₹19.4 ಕೋಟಿ

ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ತಂಡಕ್ಕೆ 19.4 ಕೋಟಿ ರು. ಬಹುಮಾನ ದೊರೆಯಿತು.