ಸಾರಾಂಶ
ಜೋಹಾನ್ಸ್‌ಬರ್ಗ್: ಭಾರತ ಪುರುಷರ ಕ್ರಿಕೆಟ್ ತಂಡ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 4 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಬಗ್ಗೆ ಶುಕ್ರವಾರ ಬಿಸಿಸಿಐ ಹಾಗೂ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಜಂಟಿ ಪ್ರಕಟನೆ ಹೊರಡಿಸಿದೆ.
ನ.8ರಂದು ಡರ್ಬನ್‌ನಲ್ಲಿ ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದ್ದು, ಬಳಿಕ ಗೆಬೆರ್ಹಾದಲ್ಲಿ ನ.10ಕ್ಕೆ 2ನೇ, ಸೆಂಚೂರಿಯನ್‌ನಲ್ಲಿ ನ.13ರಂದು 3ನೇ ಹಾಗೂ ಜೋಹಾನ್ಸ್‌ಬರ್ಗ್‌ನಲ್ಲಿ ನ.15ರಂದು ಕೊನೆ ಟಿ20 ಪಂದ್ಯ ನಿಗದಿಯಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲೂ ಭಾರತ ತಂಡ ದ.ಆಫ್ರಿಕಾ ಪ್ರವಾಸ ಕೈಗೊಂಡಿತ್ತು. 3 ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲಗೊಂಡಿದ್ದರೆ, 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1ರಿಂದ ಗೆದ್ದಿತ್ತು. 2 ಪಂದ್ಯಗಳ ಟೆಸ್ಟ್ ಸರಣಿ 1-1ರಲ್ಲಿ ಡ್ರಾಗೊಂಡಿತ್ತು.
2036ರ ವರೆಗೂ ಭಾರತ ಹಾಕಿ ತಂಡಕ್ಕೆ ಒಡಿಶಾ ಸರ್ಕಾರ ಪ್ರಾಯೋಜಕತ್ವ
ಭುವನೇಶ್ವರ: ಭಾರತ ಹಾಕಿ ತಂಡಗಳಿಗೆ ಒಡಿಶಾ ಸರ್ಕಾರ ನೀಡುತ್ತಿರುವ ಪ್ರಾಯೋಜಕತ್ವ 2036ರ ವರೆಗೂ ಮುಂದುವರಿಯಲಿದೆ. ಪ್ರಾಯೋಜಕತ್ವವನ್ನು ಇನ್ನೂ 12 ವರ್ಷಗಳ ಕಾಲ ಮುಂದುವರಿಸುವುದಾಗಿ ಶುಕ್ರವಾರ ಒಡಿಶಾ ಸರ್ಕಾರ ಘೋಷಿಸಿದೆ. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಜಿ ಸೇರಿದಂತೆ ಪ್ರಮುಖರು ಸಭೆ ನಡೆಸಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.
;Resize=(128,128))
;Resize=(128,128))
;Resize=(128,128))
;Resize=(128,128))