ನಿರೀಕ್ಷೆಯಂತೆಯೇ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 3 ಟಿ20 ಪಂದ್ಯದಲ್ಲಿ ರನ್ ಹೊಳೆ ಹರಿಯಿತು. ವಿಂಡೀಸ್ ಅಬ್ಬರದ ಬ್ಯಾಟಿಂಗ್ ನಡೆಸಿದರೂ, ಭಾರತ 14 ರನ್‌ಗಳ ರೋಚಕ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಇಂದೋರ್: ನಿರೀಕ್ಷೆಯಂತೆಯೇ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 3 ಟಿ20 ಪಂದ್ಯದಲ್ಲಿ ರನ್ ಹೊಳೆ ಹರಿಯಿತು. ವಿಂಡೀಸ್ ಅಬ್ಬರದ ಬ್ಯಾಟಿಂಗ್ ನಡೆಸಿದರೂ, ಭಾರತ 14 ರನ್‌ಗಳ ರೋಚಕ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ
ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭದಲ್ಲೇ ಸಂಜು ಸ್ಯಾಮ್ಸನ್ (3)ರ ವಿಕೆಟ್ ಕಳೆದುಕೊಂಡೂ, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್‌ರ ಸ್ಫೋಟಕ ಆಟದಿಂದ ಚೇತರಿಸಿಕೊಂಡಿತು. ಇವರಿಬ್ಬರು 6.4 ಓವರಲ್ಲಿ 108 ರನ್ ಸೇರಿಸಿದರು. ಕಿಶನ್ 18 ಎಸೆತದಲ್ಲಿ 37 ರನ್ ಸಿಡಿಸಿದರೆ, ಕೇವಲ 18 ಎಸೆತದಲ್ಲಿ ಅರ್ಧಶತಕ ಸಿಡಿಸಿ ಅಭಿಷೇಕ್ ಅಬ್ಬರಿಸಿದರು.
7 ರನ್ ಅಂತರದಲ್ಲಿ ನಾಯಕ ಶ್ರೇಯಸ್ (1) ಹಾಗೂ ಅಭಿಷೇಕ್ (30 ಎಸೆತದಲ್ಲಿ 69 ರನ್, 6 ಬೌಂಡರಿ, 5 ಸಿಕ್ಸರ್) ಔಟಾಗಿದ್ದು, ಭಾರತಕ್ಕೆ ಒತ್ತಡಕ್ಕೆ ಸಿಲುಕಿಸಿತು. ನಮನ್ ಧೀರ್ (10) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಆದರೆ, ತಿಲಕ್ ವರ್ಮಾ (28), ನಿತೀಶ್ ರೆಡ್ಡಿ (21), ಅಕ್ಷರ್ ಪಟೇಲ್ (20), ಅರ್ಶ್‌ದೀಪ್ (11) ಹಾಗೂ ಪ್ರಿನ್ಸ್ ಯಾದವ್ (13*)ರ ಕೊಡುಗೆ ಭಾರತ 20 ಓವರಲ್ಲಿ 223 ರನ್ ಗಳಿಸಲು ನೆರವಾಯಿತು.
ವಿಂಡೀಸ್ ಹೋರಾಟ:
ಶಾಯ್ ಹೋಪ್ (5) ಬೇಗನೆ ಔಟಾದರೂ, ವಿಂಡೀಸ್ ಹೋರಾಟ ಬಿಡಲಿಲ್ಲ. ಕಮಿಲ್ ಪೂರಾನ್ (42), ಶಿಮ್ರೊನ್ ಹೆಟ್ಮೇಯರ್ (43), ರುಥರ್‌ಫೋರ್ಡ್ (32), ಶಮಾರ್ ಸ್ಪ್ರಿಂಗರ್ 11 ಎಸೆತದಲ್ಲಿ ಔಟಾಗದೆ 35 ರನ್ ಸಿಡಿಸಿದರು. ಆದರೂ, ವಿಂಡೀಸ್‌ಗೆ ಗೆಲುವಿನ ನಗು ಬೀರಲು ಸಾಧ್ಯವಾಗಲಿಲ್ಲ.
ಸ್ಕೋರ್: ಭಾರತ 20 ಓವರಲ್ಲಿ 223/10 (ಅಭಿ 69, ಕಿಶನ್ 37, ಚೇಸ್ 2-38), ವಿಂಡೀಸ್ 20 ಓವರಲ್ಲಿ 209/7 (ಹೆಟ್ಮೇಯರ್ 43, ಪೂರಾನ್ 42, ಅರ್ಶ್‌ದೀಪ್ 3-44)

